ಹೊಸಪೇಟೆ: ‘ಮಾವಿನ ಹಣ್ಣಿನ ಕೊರಕ ನೊಣದ ಹತೋಟಿಗೆ ರೈತರು ಗಮನ ಹರಿಸಬೇಕು. ಪೂರ್ಣ ಮಾಗುವ ಹಂತದ ಮಾವಿನ ಕಾಯಿಗಳನ್ನು ಕೊಯ್ಲುಮಾಡಿ, ಮರದಲ್ಲೇ ಹಣ್ಣಾಗಲು ಬಿಡಬೇಡಿ. ಜತೆಗೆ ಹಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

‘ಮಾವಿನ ಹಣ್ಣಿನ ಕೊರಕ ನೊಣವು ಒಂದು ಮಧ್ಯಮ ಗಾತ್ರದ ನೊಣವಾಗಿದ್ದು ಇದು ಮಾವು ಕಾಯಿ ಹಂತದಲ್ಲಿದ್ದಾಗ ಮೊಟ್ಟೆಗಳನ್ನು ಇಡುತ್ತದೆ. ನೊಣವು ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಕಾಯಿಗಳ ಮೇಲೆ ಮೊಟ್ಟೆ ಇಡುತ್ತದೆ. ಮೊಟ್ಟೆಗಳನ್ನು ನಾಶ ಮಾಡುವುದರಿಂದ ಪ್ರಾಥಮಿಕ ಹಂತದಲ್ಲಿ ಹತೋಟಿ ಮಾಡಬಹುದು. ಇದಕ್ಕಾಗಿ ಫೆನಿಥಿಯಾನ್ 1 ಮಿ.ಲೀ. ಅನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಹತೋಟಿ ಮಾಡಬಹುದು. ಫೆರಮೋನ್ (ಆಕರ್ಷಕ) ಬಲೆಗಳನ್ನು ಉಪಯೋಗಿಸಿ 1 ಲೀಟರ್ ನೀರಿನಲ್ಲಿ ಮಿಥೈಲ್ ಯೂಜಿನಾಲ್ 1 ಮಿ.ಲೀ. ಮತ್ತು 1 ಮಿ.ಲೀ. ಮೆಲಾಥಿಯಾನ್ ಕಲಸಿ ಪ್ರತಿ ಎಕರೆಗೆ 3-4 ಬಲೆಗಳನ್ನು ಅಲ್ಲಲ್ಲಿ ಇಡುವುದರಿಂದಲೂ ಹತೋಟಿ ಸಾಧ್ಯ’ ಎಂದು ತಿಳಿಸಿದ್ದಾರೆ.

‘ಕೊಯ್ಲಿನ ನಂತರ ಕಾಯಿಯ ಮೇಲೆ ಈಗಾಗಲೇ ಇಟ್ಟಿರುವ ಮೊಟ್ಟೆಗಳನ್ನು ನಾಶಮಾಡಲು ಕಾಯಿಗಳನ್ನು ಉಪ್ಪಿನ ದ್ರಾವಣದಲ್ಲಿ 30 ಸೆಕೆಂಡ್ ನೆನೆಸಬೇಕು. ಮಾಗಿ ಉಳುಮೆ ಮಾಡುವುದರಿಂದ ನೆಲದೊಳಗೆ ಅವಿತಿರುವ ನೊಣದ ಪ್ಯುಪಾ ಹೊರಬಂದು ಬಿಸಿಲಿಗೆ ಸಾಯುತ್ತದೆ ಅಥವಾ ಇತರೆ ಪಕ್ಷಿಗಳು ತಿನ್ನುತ್ತವೆ’ ಎಂದು ಸಲಹೆ ನೀಡಿದ್ದಾರೆ.

ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಹೊಸಪೇಟೆ 91642 97220, ಮರಿಯಮ್ಮನಹಳ್ಳಿ 72048 88978, ಕಮಲಾಪುರ 81234 65548 ಸಂಪರ್ಕಿಸಲು ತಿಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-25-941973503

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.