ಹುಬ್ಬಳ್ಳಿ: ಕೇಂದ್ರ ಸರ್ಕಾರದ 1966 ಸಕ್ಕರೆ ನಿಯಂತ್ರಣ ಕಾಯ್ದೆ ಪರಿಷ್ಕರಣೆ, ಕಬ್ಬಿನ ಎಫ್ಆರ್ಪಿ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

‘ಕಬ್ಬಿನಿಂದ ಉತ್ಪತ್ತಿಯಾಗುವ ಸಿಪ್ಪೆ, ಎಥೆನಾಲ್, ಬಯೋ ಕಾಂಪೋಸ್ಟ್ ಗೊಬ್ಬರಗಳ ಲಾಭವನ್ನು ಲೆಕ್ಕ ಹಾಕಿ ಕಬ್ಬಿನ ಎಫ್ಆರ್ಪಿ ದರ ನಿಗದಿ ಮಾಡಬೇಕು. ಸಕ್ಕರೆ ಇಳುವರಿ ಪ್ರಮಾಣವನ್ನು ಕನಿಷ್ಠ ಶೇ 9ರಷ್ಟು ನಿಗದಿಗೊಳಿಸಬೇಕು. ಕಬ್ಬು ಕಟಾವು, ಸಾಗಣೆ ಜವಾಬ್ದಾರಿಯನ್ನು ಕಾರ್ಖಾನೆಗೆ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಕಬ್ಬನ್ನು ಕಾರ್ಖಾನೆಗೆ ಸರಬರಾಜು ಮಾಡಿದಾಗ ಎಫ್ಆರ್ಪಿ ದರದಲ್ಲಿ ಶೇ 25ರಷ್ಟು ಹಣ ಕಡಿತ ಮಾಡುವುದು ನಿಲ್ಲಿಸಬೇಕು. 12 ತಿಂಗಳೊಳಗೆ ಕಬ್ಬು ಕಟಾವು ಮಾಡಬೇಕು. ವಿಳಂಬವಾದರೆ ಕಬ್ಬಿನ ಸಾಲದ ಹೆಚ್ಚುವರಿ ಬಡ್ಡಿಯನ್ನು ಕಾರ್ಖಾನೆ ಪಾವತಿಸಬೇಕು’ ಎಂದು ಆಗ್ರಹಿಸಿದರು.

‘ಹೊಸ ಕಾರ್ಖಾನೆ ಆರಂಭಿಸಲು 25 ಕಿ.ಮೀ ವ್ಯಾಪ್ತಿಯ ನಿರ್ಧಾರ ಹಿಂಪಡೆಯಬೇಕು. ಹೆಚ್ಚು ಕಾರ್ಖಾನೆಗಳು ಆರಂಭವಾದರೆ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ. ಯಂತ್ರದ ಮೂಲಕ ಕಬ್ಬಿಗೆ ವೇಸ್ಟೇಜ್ ಶೇ 7ರಿಂದ ಶೇ 8 ಕಡಿತ ಮಾಡಲಾಗುತ್ತಿದ್ದು, ಶೇ 2ಕ್ಕಿಂತ ಹೆಚ್ಚು ಕಡಿತ ಮಾಡಬಾರದು ಎಂದು ನಿಯಮ ಜಾರಿಗೆ ಬರಲಿ. ಕಬ್ಬಿನ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕವೇ ರೈತರಿಗೆ ಪಾವತಿಸಬೇಕು. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುವ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು’ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-24-1006069843

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.