ಹುಣಸೂರು:‘ರಾಜ್ಯದಾದ್ಯಂತ ಪರವಾನಗಿ ಭೂ ಮಾಪಕರು 3 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ರೈತರು ಭೂ ದಾಖಲೆ ಸಕಾಲಕ್ಕೆ ಸಿಗದೆ ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರ ಭೂ ಮಾಪಕರ ಸಮಸ್ಯೆ ಪರಿಹರಿಸಬೇಕು’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಭೂ ದಾಖಲೆಗಳ ಪ್ರಕರಣ 3 ಲಕ್ಷ ಬಾಕಿ ಇದ್ದು, ಈ ಸಮಸ್ಯೆ ಪರಿಹರಿಸುವ ಉದ್ದೇಶದಿಂದ 1999 ರಲ್ಲಿ ಅಂದಿನ ಸರ್ಕಾರ ಖಾಸಗಿ ಕ್ಷೇತ್ರದ ಪರವಾನಗಿ ಹೊಂದಿರುವ ಭೂ ಮಾಪಕರನ್ನ್ನು ನಿಯೋಜಿಸಿತು. ಸ್ವಲ್ಪ ಸಮಸ್ಯೆ ಪರಿಹಾರವಾಗಿದ್ದರೂ , ಬಹಳಷ್ಟು ಪರಿಹಾರವಾಗದೆ ಉಳಿದಿದೆ. ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಪರವಾನಗಿ ಭೂಮಾಪಕರು 11 ಇ–ನಕ್ಷೆ, ತತ್ಕಾಲ್ ಪೋಡಿ, ಭೂಪರಿವರ್ತನೆ, ಇ–ಸ್ವತ್ತು ಸೇರಿದಂತೆ 19 ಭೂ ದಾಖಲೆ ಪಡೆಯಲು ಸಹಕರಿಸಿದ್ದಾರೆ. ಈ ಭೂ ಮಾಪಕರ ಕೆಲಸಕ್ಕೆ ಸಂಭಾವನೆ ಎಂದು ನಿಗದಿಗೊಳಿಸಿದ್ದು, 2016 ರಲ್ಲಿ ಸುಪ್ರಿಂ ಕೋರ್ಟ್ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನಿಯಮ ಜಾರಿಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರೂ ಅನುಷ್ಠಾನವಾಗಿಲ್ಲ ಎಂದು ತಿಳಿಸಿದ್ದಾರೆ.

ಕಂದಾಯ ಸಚಿವ ಕೃಷ್ಣಭೈರೇಗೌಡರು ಪರವಾನಗಿ ಭೂಮಾಪಕರ ನೌಕರರ ಸಮಸ್ಯೆಗೆ ಅತಿ ಶ್ರೀಘ್ರದಲ್ಲಿ ಸ್ಪಂದಿಸಿ ಮೂರು ತಿಂಗಳಿಂದ ಪ್ರತಿಭಟನೆಯಲ್ಲಿ ನಿರತರಾಗಿರುವ ಸಿಬ್ಬಂದಿಗೆ ಪರಿಹಾರ ನೀಡಿ, ರೈತರಿಗೆ ಭೂ ದಾಖಲೆ ಸಿದ್ದಪಡಿಸಲು ಕ್ರಮವಹಿಸಬೇಕು ಎಂದು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-38-1100013569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.