ಹುಣಸೂರು: ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಆಹಾರ ಉತ್ಪತ್ತಿ ದ್ವಿಗುಣ ಮಾಡಿಕೊಳ್ಳಲು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒತ್ತು ನೀಡುತ್ತಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ದಿವಾಕರ್ ಹೇಳಿದರು.

ನಗರದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದರು.

ಆಧುನಿಕ ತಂತ್ರಜ್ಞಾನವನ್ನು ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಉತ್ಪತ್ತಿ ಹಾಗೂ ಆರ್ಥಿಕ ಶಕ್ತಿ ದ್ವಿಗುಣ ಮಾಡಿಕೊಳ್ಳಲು ಸಾಧ್ಯ. ಈ ದಿಕ್ಕಿನಲ್ಲಿ ಪ್ರತಿಯೊಬ್ಬ ಪ್ರಗತಿಪರ ರೈತರು ಆಲೋಚಿಸಿ, ಆಧುನಿಕ ತಂತ್ರಜ್ಞಾನದ ಟ್ರ್ಯಾಕ್ಟರ್ ಬಳಸಿ ಕಾರ್ಯಕ್ಷಮತೆ ವೃದ್ಧಿಸಿಕೊಳ್ಳಬೇಕು ಎಂದರು.

ಇತ್ತೀಚಿನ ದಿನದಲ್ಲಿ ಕೃಷಿ ಕ್ಷೇತ್ರ ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿದ್ದು, ಮಾನವ ಶಕ್ತಿಯ ಬದಲಿಗೆ ಯಂತ್ರ ಶಕ್ತಿ ಬಳಸಿಕೊಂಡು ದುಪ್ಪಟ್ಟು ಆಹಾರ ಉತ್ಪತ್ತಿ ಮಾಡಲು ರೈತರು ಸಜ್ಜಾಗಬೇಕು ಎಂದು ಕರೆ ನೀಡಿದರು.

ಕಸಬಾ ಪ್ರಾಥಮಿಕ ಕೃಷಿ ಪತ್ತಿನ ನಿಕಟ ಪೂರ್ವ ಅಧ್ಯಕ್ಷ ವಾಸೇಗೌಡ ಮಾತನಾಡಿ, ರೈತರಿಗೆ ಹೊಲ ಗದ್ದೆಗಳಿಗೆ ಹೋಗಿ ಬರುವ ವ್ಯವಸ್ಥೆಗೆ ಸಹಕಾರಿ ಸಂಘದ ವತಿಯಿಂದ ದ್ವಿಚಕ್ರವಾಹನವನ್ನು ಸಾಲದ ಸೌಲಭ್ಯದಲ್ಲಿ ವಿತರಿಸುತ್ತಿದ್ದು, ಸಕಾಲದಲ್ಲಿ ಕಂತಿನ ಹಣ ಪಾವತಿಸಬೇಕು. ಸಹಕಾರಿ ಸಂಘಗಳಿಗೆ ಅಡಿಪಾಯ ಷೇರುದಾರರು, ಸಹಕಾರಿ ಸಂಘದಲ್ಲಿ ಹೆಚ್ಚಿನ ವಹಿವಾಟು ನಡೆಸಿ ಲಾಭದತ್ತ ತೆಗೆದುಕೊಂಡು ಹೋಗಲು ಷೇರುದಾರರ ಸಹಕಾರ ಅಗತ್ಯ ಎಂದರು.

ಉಪಾಧ್ಯಕ್ಷ ಪುಟ್ಟರಾಜು, ನಿರ್ದೇಶಕ ರವಿಕುಮಾರ್, ರುದ್ರಬೋವಿ, ಮಹದೇವು, ರಮೇಶ್, ಬೀರೇಶ್, ಗೀತಾ ನಿಂಗರಾಜ್, ಶಶಿಕಲಾಬಾಯಿ, ಸುನಂದ, ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ದೇವಪ್ಪ, ಲಾಜರ್, ಕೃಷ್ಣ, ದಿನೇಶ್, ಪವನ್, ಕಿರಣ್ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-38-62805283

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.