ಇಂಡಿ: ‘ಸ್ವಲ್ಪ ತಾಳ್ಮೆ ಇದ್ದರೆ 25ರಿಂದ 30 ವರ್ಷಗಳ ವರೆಗೆ ನಿರಂತರ ಆದಾಯ ಕೊಡುವ ತಾಳೆ ಕೃಷಿ ಕಡೆಗೆ ತಾಲ್ಲೂಕಿನಲ್ಲಿ ಗಮನ ಹರಿಸಿದವರು ವಿರಳ. ಈ ವಿಧದಲ್ಲಿ ಇಂಡಿಯ ಪ್ರಗತಿಪರ ರೈತ ಶಿವಾನಂದ ಬಗಲಿ ಮತ್ತು ಇತರರು ಸಾಧನೆ ತೋರಿಸಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್. ಎಸ್. ಪಾಟೀಲ ಹೇಳಿದರು.

ಇಲ್ಲಿನ ಶಿವಾನಂದ ಬಗಲಿ ಇವರ ತೋಟದಲ್ಲಿ ತೋಟಗಾರಿಕೆ ಇಲಾಖೆ, ಪಾಮ್ ಆಯಿಲ್ ಕಂಪನಿಯಿಂದ ಮಂಗಳವಾರ ನಡೆದ ತಾಳೆ ಎಣ್ಣೆ ಕ್ಷೇತ್ರೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೃಷಿ ಉತ್ಪನ್ನ ಬೆಲೆಗಳು ದಿನದಿಂದ ದಿನಕ್ಕೆ ಚಿಂತಾಜನಕ ಆಗುತ್ತಿರುವ ಸಂದರ್ಭದಲ್ಲಿ ರೈತಾಪಿ ವರ್ಗ ಲಾಭದಾಯಕ ಉಪ ಬೆಳೆಯಾದ ತಾಳೆ ಕೃಷಿಯತ್ತ ತಮ್ಮ ಚಿತ್ತ ಹರಿಸಿದ್ದಾರೆ’ ಎಂದರು.

ಪಾಮ್ ಆಯಿಲ್ ಕಂಪನಿಯ ಶ್ರೀಕಾಂತ, ಗೊಬ್ಬರ ನಿರ್ವಹಣೆ ಹಾಗೂ ಕೀಟಬಾಧೆ ಬರದಂತೆ ಹೇಗೆ ತಡೆಗಟ್ಟಬೇಕು, ಕಟಾವು ಹೇಗೆ ಮಾಡಬೇಕು ಎಂದು ರೈತರಿಗೆ ಮಾಹಿತಿ ನೀಡಿದರು.

ಪಾಮ್ ಎಣ್ಣೆ ಏರಿಯಾ ಮ್ಯಾನೇಜರ್ ಶಾಂತಪ್ಪ ರೆಡ್ಡಿ, ‘ವರ್ಷಪೂರ್ತಿ ಇಳುವರಿ ಸಿಗುವ ಬಹು ಬೇಡಿಕೆಯ ತಾಳೆ ಬೆಳೆಯನ್ನು ಈಗ ತಾಲ್ಲೂಕಿನಲ್ಲಿ ಬೆಳೆದು ರೈತರು ಯಶಸ್ವಿಯಾಗುತ್ತಿದ್ದಾರೆ’ ಎಂದರು.

ಪ್ರಗತಿಪರ ರೈತರಾದ ರವೀಂದ್ರ ಬಾಲಗಾಂವ, ಆನಂದ ಅಗರಖೇಡ, ದೇವೇಂದ್ರ ರುದ್ರಾಕ್ಷಿ, ಚನ್ನಪ್ಪ ಪೂಜಾರಿ, ಶಿವಾನಂದ ಬಗಲಿ, ಪರಮಾನಂದ ಚಾಂದಕವಟೆ, ದಯಾನಂದ ಚಿಕ್ಕಪಠ, ಗುರುಪಾದಪ್ಪ ಸಕ್ರಿ, ಕಿರಣ ಧನಶೆಟ್ಟಿ, ಅಣ್ಣಪ್ಪ ದಶವಂತ, ಸಿದ್ದಾರೂಢ ಚಿಂಚೋಳಿ, ಶ್ರೀನಾಥ ಹೊಸಮನಿ, ನಿವೃತ್ತ ಪ್ರಾಚಾರ್ಯ ಎ.ಎಸ್. ಗಾಣಿಗೇರ, ಸಂತೋಷ ಪಾಟೀಲ, ಬಾಪುಗೌಡ ಪಾಟೀಲ, ಭೀಮರಾಯ ಬಗಲಿ, ಸಿದ್ದು ವಾಂಗಿ, ಚಿದಾನಂದ ಪಾಟೀಲ, ರಾಜೇಂದ್ರ ಕಾರಕಲ್, ವಿಜೇಂದ್ರ ದಿಂಡೂರ, ಭೀಮಣ್ಣ ಚಿಕ್ಕಮಣೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-685898380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.