ಖಾನಾಪುರ: ‘ಈ ವರ್ಷ ಫ್ರೂಟ್ಸ್ ಐಡಿಯ ಮೂಲಕವೇ ರೈತರಿಗೆ ಯೂರಿಯಾ ವಿತರಣೆ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಯೂರಿಯಾ ಗೊಬ್ಬರದ ದುರ್ಬಳಕೆ ತಡೆಗಟ್ಟಲಾಗುತ್ತದೆ’ ಎಂದು ಉಪ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ್ ವಿವರಿಸಿದರು.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ತರಕಾರಿ ಮತ್ತು ಹಣ್ಣಿನ ಬೆಳೆಗಳಲ್ಲಿ ಡಿಎಪಿ ರಸಗೊಬ್ಬರ ಬಳಕೆ ನಿಯಂತ್ರಿಸುವುದರೊಂದಿಗೆ ಸಮತೋಲಿತ ಪೋಷಕಾಂಶ ಬಳಕೆಗೆ ಒತ್ತು ನೀಡುವಂತೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 'ಧರತಿ ಮಾತಾ ಬಚಾವೋ' ಅಭಿಯಾನದ ಮೂಲಕ ರೈತರಿಗೆ ಸಮತೋಲಿತ ಗೊಬ್ಬರ ಬಳಕೆಯ ಕುರಿತು ಜಾಗೃತಿ ಮೂಡಿಸುವಂತೆ ಗೊಬ್ಬರ ಮಾರಾಟಗಾರರಿಗೆ ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕ ಎಚ್.ಡಿ.ಕೊಲೆಕರ ಮಾತನಾಡಿ, ‘ಕೆಲವು ಕಡೆಗಳಲ್ಲಿ ಗೊಬ್ಬರ ಮಾರಾಟಗಾರರು ಕೆಲವೊಂದು ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುತ್ತಿರುವ ಬಗ್ಗೆ ಮತ್ತು ಹೆಚ್ಚಿನ ಬೆಲೆಗೆ ಗೊಬ್ಬರ ಮಾರುತ್ತಿರುವ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈ ರೀತಿಯ ಸನ್ನಿವೇಶಗಳು ಕಂಡುಬಂದಲ್ಲಿ ಅಂತಹ ಗೊಬ್ಬರ ವಿತರಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನಿದೆ. ಈ ವರ್ಷದ ಮುಂಗಾರು ಹಂಗಾಮು ಆರಂಭಕ್ಕೂ ಮೊದಲು ಎಲ್ಲ ವಿಧದ ಗೊಬ್ಬರ ವಿತರಿಸಲು ಕೃಷಿ ಇಲಾಖೆ ಬದ್ಧವಾಗಿದೆ. ರಸಗೊಬ್ಬರ ಸರಬರಾಜು ವಿಷಯದಲ್ಲಿ ರೈತರು ಆತಂಕ ಹೊಂದುವ ಅಗತ್ಯವಿಲ್ಲ ಎಂದರು.

ಸಹಾಯಕ ಕೃಷಿ ನಿರ್ದೇಶಕ ಸತೀಶ ಮಾವಿನಕೊಪ್ಪ ಮಾತನಾಡಿ, ‘ಯೂರಿಯಾಗೆ ಪರ್ಯಾಯವಾಗಿ ನ್ಯಾನೋ ಯೂರಿಯಾ, ಅಮೋನಿಯಂ ಸಲ್ಫೇಟ್ ಬಳಕೆ, ಸಾವಯವ ಗೊಬ್ಬರಗಳ ಉಪಯೋಗಕ್ಕೆ ಉತ್ತೇಜನ ನೀಡಲಾಗುತ್ತಿದೆ. ರೈಜೋಬಿಯಮ್, ಆಜೋಟೋಬ್ಯಾಕ್ಟರ್, ಅಜೋಸ್ಪಿರಿಲ್ಲಂ ಮತ್ತು ಪಿ.ಎಸ್.ಬಿ ಸೇರಿದಂತೆ ಸೂಕ್ಷ್ಮ ಜೀವಾಣು ಗೊಬ್ಬರಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಹಾಗೂ ರೈತರು ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿಯಿಂದ ರಾಸಾಯಿನಿಕ ಗೊಬ್ಬರಗಳ ಮೇಲಿನ ಅವಲಂಬನೆ ತಪ್ಪಿಸಬೇಕು’ ಎಂದು ಕರೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ (ವಿಷಯ ತಜ್ಞ) ಸಿ.ಐ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರು, ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-21-1665138005

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.