ನರೇಗಲ್: ಮಣ್ಣಿನ ಸವಕಳಿ ತಡೆಯಲು ಮತ್ತು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಚೌಕಮಡಿ ನಿರ್ಮಾಣ ವಿಧಾನವನ್ನು ಕೋಟುಮಚಗಿ ರೈತರು ಅಳವಡಿಸಿಕೊಂಡಿದ್ದಾರೆ.

ಮಳೆ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ನಿಲ್ಲಿಸಿ, ಇಂಗಿಸುವ ಮೂಲಕ ಮಣ್ಣನ್ನು ಹದಗೊಳಿಸಲು ಈ ಪ್ರಯತ್ನ ಮಾಡುತ್ತಿದ್ದಾರೆ.

ಬೇಸಿಗೆಯಲ್ಲಿ ಮಳೆ ಸುರಿದರೆ ಜಮೀನಿನಲ್ಲಿ ರಂಟೆ ಹೊಡೆಯುವುದು, ಹರಗುವುದು, ಒಂಟಿ ನೇಗಲ, ಜೋಡು ನೇಗಲ ಹೊಡೆಸುವುದು ಸಾಮಾನ್ಯ. ಹೀಗೆ ಮಾಡುವುದರಿಂದ ಒಳಭಾಗದ ಮಣ್ಣು ಹೊರಗೆ ಬರುತ್ತದೆ ಹಾಗೂ ಸೂರ್ಯನ ಕಿರಣಗಳ ಪರಿಣಾಮದಿಂದ ಅದು ಪರಿವರ್ತನೆಯಾಗುತ್ತದೆ.

ಸದ್ಯ ಖಾಲಿಯಾಗಿರುವ ಹೊಲದಲ್ಲಿ ಚೌಕ, ಆಯತಾಕಾರದ ಚೌಕ ಮಡಿಗಳನ್ನು ರೈತರು ನಿರ್ಮಿಸುತ್ತಿದ್ದಾರೆ. ಇದು ತೇವಾಂಶ ಕಾಪಾಡಲು ಮತ್ತು ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ರಕ್ಷಣೆ ಮಾಡಲು ನೆರವಾಗುತ್ತದೆ ಎನ್ನುತ್ತಾರೆ ಸಾವಯವ ಕೃಷಿಕರು.

‘ಜೋಡೆತ್ತುಗಳಿಗೆ ಚಿಕ್ಕದಾದ ಕುಂಟೆಗಳನ್ನು ಕಟ್ಟಿದ್ದಾರೆ. ಇದರಿಂದ ಮಡಿಗಳನ್ನು ನಿರ್ಮಿಸುತ್ತಿದ್ದಾರೆ. ಒಣ ಬೇಸಾಯ ಕ್ರಮ ಅನುಸರಿಸುವ ಪ್ರತಿಯೊಬ್ಬರೂ ಹೀಗೆ ಮಾಡಬೇಕು. ಇದರಿಂದ ಮಳೆ ಕಡಿಮೆಯಾದರೂ ಮಣ್ಣು ತೇವಾಂಶ ಬಿಟ್ಟುಕೊಡುವುದಿಲ್ಲ. ಬೆಳೆಗಳು ಸಹ ಚೆನ್ನಾಗಿ ಬೆಳೆದು ಉತ್ತಮ ಇಳುವರಿ ನೀಡುತ್ತವೆ’ ಎನ್ನುತ್ತಾರೆ ಕೋಟುಮಚಗಿಯ ಸಾವಯವ ಕೃಷಿಕ ವೀರೇಶ ನೇಗಲಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-23-1804003795

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.