ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ: ಗಮನಸೆಳೆದ ಎಣ್ಣೆ ತೆಗೆಯುವ ಯಂತ್ರ

ಸಣ್ಣ ರೈತರಿಗೆ ಅನುಕೂಲ: ಎಲ್ಲ ಎಣ್ಣೆ ಕಾಳುಗಳಿಗೆ ಬಳಕೆ
Last Updated 12 ನವೆಂಬರ್ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಣ್ಣೆ ತೆಗೆಯುವ ಚಿಕ್ಕದಾದ ಯಂತ್ರ ಅಭಿವೃದ್ಧಿಪಡಿಸಲಾಗಿದೆ.

ಕೃಷಿ ವಿಶ್ವವಿದ್ಯಾಲಯದ ಅರಣ್ಯ ಮತ್ತು ಪರಿಸರ ವಿಭಾಗದ ವಿಜ್ಞಾನಿಗಳು ಈ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ಯಾವುದೇ ರೀತಿಯ ಎಣ್ಣೆ ಕಾಳುಗಳನ್ನು ಬಳಸಿ ಎಣ್ಣೆ ತೆಗೆಯಬಹುದಾಗಿದೆ.

ಹೊಂಗೆ, ಹಿಪ್ಪೆ, ಬೇವು, ಶೇಂಗಾ, ಸೂರ್ಯಕಾಂತಿ, ಕೊಬ್ಬರಿ, ಸಾಸಿವೆಯಿಂದ ಎಣ್ಣೆ ತೆಗೆಯಬಹುದು. ಒಂದು ಗಂಟೆಯಲ್ಲಿ 10 ಕೆ.ಜಿ. ಬೀಜ ಅರೆಯಬಹುದು. ಕೆಲವು ಬೀಜಗಳಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಯಂತ್ರಕ್ಕೆ ₹35 ಸಾವಿರ ಬೆಲೆ ನಿಗದಿಪಡಿಸಲಾಗಿದೆ. ಪ್ರಾಯೋಗಿಕವಾಗಿ ಹಾಸನ ಜಿಲ್ಲೆಯ ಹತ್ತು ಸ್ವಸಹಾಯ ಗುಂಪುಗಳಿಗೆ ಈ ಯಂತ್ರ ನೀಡಲಾಗಿದೆ.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆರ್ಥಿಕ ನೆರವಿನಿಂದ ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯುತ್‌ ಚಾಲಿತ ಯಂತ್ರ ಇದಾಗಿದ್ದು, 4ರಿಂದ 5 ಗಂಟೆಗೆ ಒಂದು ಯೂನಿಟ್‌ ವಿದ್ಯುತ್‌ ತಗಲುತ್ತದೆ.

‘ಈ ಯಂತ್ರಕ್ಕೆ 1 ವರ್ಷ ವಾರಂಟಿ ಇದೆ. ಕಡಿಮೆ ವೆಚ್ಚದಲ್ಲಿ ರೈತರಿಗೆ ಎಣ್ಣೆ, ಹಿಂಡಿ ದೊರೆಯುತ್ತದೆ. ಹೀಗಾಗಿ, ಹೆಚ್ಚು ಅನುಕೂಲಕರ ಮತ್ತು ಎಲ್ಲೆಡೆಯೂ ಕೊಂಡೊಯ್ಯಬಹುದಾಗಿದೆ’ ಎಂದು ಯುವ ವಿಜ್ಞಾನಿ ರಾಜೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT