ಪುತ್ತೂರು: ‘ಗೇರು ಕೃಷಿಗೆ ಉತ್ತಮ ಭವಿಷ್ಯವಿದ್ದು, ಗೇರು ಬೀಜದ ಜತೆಗೆ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಪ್ರಸ್ತುತ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ದೇಶಕ್ಕೆ ಅಗತ್ಯವಿರುವಷ್ಟು ಗೋಡಂಬಿ ಉತ್ಪಾದನೆಗೆ ಗಮನ ಹರಿಸಬೇಕು’ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಲನ್ ಹೇಳಿದರು.

ತಾಲ್ಲೂಕಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ಸುಸ್ಥಿರ ಗೋಡಂಬಿ ಉತ್ಪಾದನೆ ಮತ್ತು ಮೌಲ್ಯ ಸರಪಳಿ ಅಭಿವೃದ್ಧಿಗಾಗಿ ವೈಜ್ಞಾನಿಕ ಸಮಾನತೆಗಳ 3 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಗೇರು ಅಭಿವೃದ್ಧಿ ಮಂಡಳಿಯಲ್ಲಿ 25 ಸಾವಿರ ಹೆಕ್ಟೇರ್ಗೂ ಅಧಿಕ ಭೂಮಿಯಲ್ಲಿ ಗೇರು ಕೃಷಿ ಇದೆ. ಆದರೆ ಸುಮಾರು 40 ವರ್ಷಗಳಷ್ಟು ಹಳೆಯ ಮರಗಳಾಗಿರುವ ಕಾರಣ ಇಳುವರಿ ಕಡಿಮೆಯಾಗಿದೆ. ಈ ನೆಡುತೋಪುಗಳಿಗೆ ಹೊಸ ಹೈಬ್ರೀಡ್ ತಳಿಗಳನ್ನು ಹಾಕುವ ನಿಟ್ಟಿನಲ್ಲಿ ಕಾರ್ಯಯೋಜನೆ ಮಾಡಲಾಗುತ್ತಿದೆ ಎಂದರು.

ಗೇರು ನೆಡುತೋಪುಗಳಲ್ಲಿ ಪ್ರಸ್ತುತ ಬೀಜಾಧಾರಿತ ಮರಗಳಿವೆ. ಒಂದು ಮರದಲ್ಲಿ ಕನಿಷ್ಟ 8 ಕೆ.ಜಿ. ಇಳುವರಿ ಸಿಗಬೇಕಿದ್ದರೂ, 3 ಕೆ.ಜಿ. ಮಾತ್ರ ದೊರಕುತ್ತಿದೆ. ರಕ್ಷಿತಾರಣ್ಯಕ್ಕೆ ಸೇರಿದ ಭೂಮಿಯಲ್ಲಿ ಈ ನೆಡುತೋಪುಗಳಿರುವುದರಿಂದ ಹೆಚ್ಚಿನ ಬಂಡವಾಳ ಬಳಸಿ ಅಭಿವೃದ್ಧಿ ಮಾಡಲು ತಾಂತ್ರಿಕ ತೊಂದರೆಗಳಿವೆ. ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ಈಗ ಕಸಿ ಗಿಡಗಳನ್ನು ನೆಡಲಾಗುತ್ತಿದೆ. ಗೇರು ಸಂಶೋಧನಾ ನಿರ್ದೇಶನಾಲಯ ಗೇರುಬೀಜ, ಹಣ್ಣಿನಿಂದ ಬಿಸ್ಕತ್, ಬೆಲ್ಲ, ಜಾಮ್, ಜ್ಯೂಸ್ನಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರು ಮಾಡಿದೆ. ಇದನ್ನು ಮಾರುಕಟ್ಟೆ ಮಾಡಲು ಪೇಟೆಂಟ್ ನೀಡುವ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಜೆ. ದಿನಕರ ಅಡಿಗ ಮಾತನಾಡಿ, ಬದುಕು ಕಟ್ಟಿಕೊಳ್ಳಲು ಗೇರು ಕೃಷಿ ಸಮೃದ್ಧ ಬೆಳೆಯಾಗಿದೆ. ಇಂದು 1 ಕೆ.ಜಿ. ಗೇರು ಬೀಜಕ್ಕೆ ₹150 ದರವಿದೆ. ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನದ ಕಡೆ ಗಮನ ಹರಿಸಿದರೆ ₹650 ಮೌಲ್ಯ ಪಡೆಯಬಹುದು. ಸಂಶೋಧನೆಗಳ ಮೂಲಕ 17 ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಕೇರಳ ಕೊಚ್ಚಿಯ ಡಿಸಿಸಿಡಿ ಉಪನಿರ್ದೇಶಕ ದಾದಾಸಾಹೇಬ್ ದೇಸಾಯಿ ಮಾತನಾಡಿ, ದೇಶದಲ್ಲಿ ಗೇರು ಬೆಳೆ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯಾಗುತ್ತಿಲ್ಲ. ಹಾಗಾಗಿ 11 ಲಕ್ಷ ಮೆಟ್ರಿಕ್ ಟನ್ ಗೇರು ಬೀಜವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 2030ಕ್ಕೆ ಗೇರು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ 1.2 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಗೇರು ಬೆಳೆಯುವ ಯೋಜನೆ ರೂಪಿಸಲಾಗಿದೆ. ಹಳೆಯ ಗಿಡಗಳ ಬದಲಿಗೆ ನೂತನ ಹೈಬ್ರೀಡ್ ತಳಿಗಳನ್ನು ಬೆಳೆಸುವ ಮೂಲಕ ಗೇರು ಬೆಳೆ, ಮೌಲ್ಯವರ್ಧಿತ ಉತ್ಪನ್ನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಗೇರು ಸಂಶೋಧನಾ ನಿರ್ದೇಶನಾಲಯದ ಮುಖ್ಯ ವಿಜ್ಞಾನಿ ಈರದಾಸಪ್ಪ ಸ್ವಾಗತಿಸಿದರು. ಶರಣ್ಯ ಪ್ರಾರ್ಥಿಸಿದರು. ವಿಜ್ಞಾನಿ ಅಶ್ವಥಿ ಚಂದ್ರಶೇಖರ್ ವಂದಿಸಿದರು. ಮಂಜು ಮ್ಯಾನಿವಲ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-29-1389311078

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.