ಬದ್ದೇಪಲ್ಲಿ(ಸೈದಾಪುರ):‘ಗಿಡಗಳ ಸುತ್ತಲೂ ಹುಲ್ಲು ಮತ್ತಿತರ ಕಸ ಬೆಳೆಯದಂತೆ ನೋಡಿಕೊಳ್ಳುವ ಮೂಲಕ ರೋಗ ಹರಡದಂತೆ ನೋಡಿಕೊಳ್ಳಬೇಕು’ ಎಂದು ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ದತ್ತಾತ್ರೇಯ ಪಾಟೀಲ ರೈತರಿಗೆ ಸಲಹೆ ನೀಡಿದರು.

ಸಮೀಪದ ಬದ್ದೇಪಲ್ಲಿ ಗ್ರಾಮದ ಕೃಷಿಕ ನರಸಿಂಹಲು ಅವರ ಮಾವಿನ ತೋಟಕ್ಕೆ ಸೋಮವಾರ ಭೇಟಿ ನೀಡಿದ ಅವರು ಮಾವಿನ ಗಿಡಗಳ ಒಣಗುವಿಕೆ ಕುರಿತು ಪರಿಶೀಲನೆ ಮಾಡಿ ಮಾಹಿತಿ ನೀಡಿದರು.

‘ಗಿಡಗಳು ಒಣಗಲಿಕ್ಕೆ ಡೈ ಬ್ಯಾಕ್ ಮತ್ತು ಗಮ್ಮೊಸಿಸ್ ರೋಗಗಳು ಹಾಗೂ ಗಿಡ ಕೊರೆಯುವ ಹುಳ ಪ್ರಮುಖ ಕಾರಣವಾಗಿವೆ. ಮಳೆಗಾಲ ಮುಗಿದ ಕೂಡಲೇ ಬೋರ್ಡ್ ಪೆಸ್ಟಿಂಗ್ ಹಾಗೂ ಮೈಕ್ರೋ ನ್ಯೂಟ್ರಿಂಟ್ ಮ್ಯಾಂಗೋ ಸ್ಪೆಷಲ್ ಸಿಂಪರಣೆ ಮಾಡಬೇಕು. ಇದಲ್ಲದೆ ಗಿಡಗಳ ಸುತ್ತಲೂ ಕಸ ಕಡ್ಡಿ ಸ್ವಚ್ಛತೆ, ರೆಂಬೆಗಳನ್ನು ಆಗಾಗ ಕಟಾವು ಮಾಡುವುದು ಹೀಗೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಲ್ಲಿ ಗಿಡಗಳು ಒಣಗಿ ಹಾಳಾಗುವುದನ್ನು ತಡೆಯಬಹುದಾಗಿದೆ’ ಎಂದು ತಿಳಿಸಿದರು.

‘ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕಾಲ ಕಾಲಕ್ಕೆ ಸಲಹೆಗಳನ್ನು ಪಡೆಯಲು ತೋಟಗಾರಿಕಾ ಇಲಾಖಾಧಿಕಾರಿಗಳನ್ನು ಸಂಪರ್ಕ ಮಾಡುವ ಮುಖಾಂತರ ಅವಶ್ಯ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತೋಟಗಾರಿಕಾ ವಿಸ್ತರಣಾಧಿಕಾರಿ ಮಂಜುಳಾ, ಸೈದಾಪುರ ವಲಯ ತೋಟಗಾರಿಕಾ ಅಧಿಕಾರಿ ಮಹಾಂತೇಶ, ಬಳಿಚಕ್ರ ವಲಯದ ಬೀರಲಿಂಗಪ್ಪ ಪೂಜಾರಿ ಸೇರಿದಂತೆ ರೈತರಾದ ನರಸಿಂಹಲು ಪಾಳೆಂ, ಶಿವಾನಂದ ಪಾಳೆಂ ಸೇರಿದಂತೆ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-30-1148692555

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.