ವಾಯುಸೇನೆ ದಾಳಿ; ಗೊಂದಲಕ್ಕೆ ಇತಿಶ್ರೀ ಹಾಕಲಿ

ಮಂಗಳವಾರ, ಏಪ್ರಿಲ್ 23, 2019
31 °C
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ

ವಾಯುಸೇನೆ ದಾಳಿ; ಗೊಂದಲಕ್ಕೆ ಇತಿಶ್ರೀ ಹಾಕಲಿ

Published:
Updated:

ವಿಜಯಪುರ: ‘ವಾಯುಸೇನೆ ದಾಳಿ ವಿಷಯದಲ್ಲಿ ಕೇಂದ್ರ ಸರ್ಕಾರ, ಪ್ರಶ್ನಿಸುವವರ ಬಾಯ್ಮುಚ್ಚಿಸುವ ಕೆಲಸ ಮಾಡುವ ಬದಲು, ಕೆಲ ಸ್ಪಷ್ಟ ಮಾಹಿತಿಯನ್ನು ದೇಶದ ಜನರ ಮುಂದಿಡಲಿ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಹೇಳಿದರು.

‘ರಕ್ಷಣಾ ಇಲಾಖೆ ಮೇಲೆ ನಮಗೆ ವಿಶ್ವಾಸವಿದೆ. ಆದರೆ ವಾಯು ದಾಳಿಯಲ್ಲಿ 300 ಜನ ಉಗ್ರರು ಸತ್ತರು. ಮಸೂದ್‌ ಅಜರ್‌ ಸಹೋದರ ಸತ್ತಿದ್ದಾನೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಈ ವಿಷಯದಲ್ಲಿ ಸ್ಪಷ್ಟ ಮಾಹಿತಿ ನೀಡಬೇಕು’ ಎಂದು ಭಾನುವಾರ ವಿಜಯಪುರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ತಿಳಿಸಿದರು.

‘ಇದೊಂದು ಅಂತರರಾಷ್ಟ್ರೀಯ ವಿಷಯ. ಗೋಪ್ಯತೆ, ಭದ್ರತೆ ಕಾರಣದಿಂದ ಎಲ್ಲವನ್ನೂ ಹೇಳಲಾಗುವುದಿಲ್ಲ. ಅದೂ ನಮಗೂ ಗೊತ್ತಿದೆ. ಆದರೆ ಕೆಲ ಪ್ರಮುಖ ವಿಷಯದಲ್ಲಾದರೂ; ಸ್ಪಷ್ಟ ಮಾಹಿತಿಯನ್ನು ಕೇಂದ್ರ ದೇಶದ 130 ಕೋಟಿ ಜನರಿಗೂ ನೀಡಬೇಕಿದೆ’ ಎಂದರು.

ಸ್ಪಷ್ಟ ಚಿತ್ರಣ: ‘ಲೋಕಸಭಾ ಚುನಾವಣೆಯ ಮೈತ್ರಿ ಕುರಿತಂತೆ ಸೋಮವಾರ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಕಾಂಗ್ರೆಸ್‌, ಜೆಡಿಎಸ್‌ ಸಂಸದರಿಲ್ಲದ 16 ಕ್ಷೇತ್ರಗಳ ಕುರಿತಂತೆ ಚರ್ಚೆ ನಡೆಸಲಿದ್ದೇವೆ. ಒಂದೆರೆಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ದಿನೇಶ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಚಿಂಚೋಳಿ ಶಾಸಕ ಉಮೇಶ ಜಾಧವ ಅವರಿಗೆ ಕಾಂಗ್ರೆಸ್‌ ಅನ್ಯಾಯ ಎಸಗಿಲ್ಲ. ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ತೊರೆಯಲು ಮುಂದಾಗಿದ್ದಾರಷ್ಟೇ’ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರತಿಕ್ರಿಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !