ವಾಯುಮಾಲಿನ್ಯ: ಸಾವು ದುಪ್ಪಟ್ಟು!

ಗುರುವಾರ , ಮಾರ್ಚ್ 21, 2019
32 °C

ವಾಯುಮಾಲಿನ್ಯ: ಸಾವು ದುಪ್ಪಟ್ಟು!

Published:
Updated:
Prajavani

ಪ್ಯಾರಿಸ್‌: ವಾಯುಮಾಲಿನ್ಯದ ಪರಿಣಾಮದಿಂದ ಜಗತ್ತಿನಲ್ಲಿ ಪ್ರತಿ ವರ್ಷ 80.80 ಲಕ್ಷ ಜನ ಅಕಾಲಿಕವಾಗಿ ಸಾವಿಗೀಡಾಗುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಈ ಮೊದಲು ಅಂದಾಜಿಸಿದ್ದಕ್ಕಿಂತಲೂ ಈ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ. 

ಯುರೋಪಿಯನ್‌ ಹಾರ್ಟ್‌ ಜರ್ನಲ್‌ನಲ್ಲಿ ಈ ವರದಿ ಪ್ರಕಟವಾಗಿದೆ. 

‘ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿ ಹೆಚ್ಚುತ್ತಿದ್ದು, ಊಹಿಸಿದ್ದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ 2015ರಲ್ಲಿ ಜನರು ಸಾವಿಗೀಡಾಗಿದ್ದಾರೆ’ ಎಂದು ಜರ್ಮನಿಯ ಮೈಂಜ್‌ ವೈದ್ಯಕೀಯ ವಿಶ್ವವಿದ್ಯಾಲಯದ ಪ್ರೊಫೆಸರ್‌ ಥಾಮಸ್‌ ಮುಂಝೆಲ್‌ ಹೇಳಿದ್ದಾರೆ. 

‘ಕಳೆದ ದಶಕಗಳಿಗೆ ಹೋಲಿಸಿದರೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಈ ಕುರಿತು ರೂಪಿಸಿದ ಮಾನದಂಡಗಳು ಈಗ ಕಠಿಣವಾಗಿವೆ. ಆದರೂ, ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ’ ಎಂದು ಯುರೋಪಿಯನ್‌ ಪರಿಸರ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹನ್ಸ್‌ ಬ್ರುಯ್‌ನಿಕ್ಸ್‌ ಹೇಳಿದ್ದಾರೆ.  ‘ಜಗತ್ತಿನಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 120 ಮಂದಿಯ ಸಾವಿಗೆ ವಾಯುಮಾಲಿನ್ಯ ಕಾರಣವಾಗುತ್ತಿದೆ. ಆದರೆ, ಈ ಪ್ರಮಾಣ ಯುರೋಪ್‌ನಲ್ಲಿ ಹೆಚ್ಚಾಗಿದ್ದು, ಪ್ರತಿ ಲಕ್ಷ ಮಂದಿಗೆ 133 ಜನ ಈ ಕಾರಣದಿಂದ ಸಾವಿಗೀಡಾಗುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. 

‘ಕಳಪೆ ವಾಯುಗುಣಮಟ್ಟ, ಹೆಚ್ಚುತ್ತಿರುವ ಜನಸಾಂದ್ರತೆ, ಮಿತಿಮೀರಿದ ಕೈಗಾರಿಕೀಕರಣ, ಹೆಚ್ಚಿದ ವಾಹನಗಳ ಬಳಕೆ ಇದಕ್ಕೆ ಕಾರಣವಾಗಿದೆ’ ಎಂದು ಸಂಶೋಧಕರಾದ ಜೋಸ್‌ ಲೆಲೀವೆಲ್ಡ್‌ ಹೇಳಿದ್ದಾರೆ.

 

ವಾಯುಮಾಲಿನ್ಯದ ಪರಿಣಾಮ
ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರೆ ಹೃದಯ ಸಂಬಂಧಿ ಕಾಯಿಲೆಗಳು, ಮೆದುಳು ಸಂಬಂಧಿ ರೋಗಗಳು ಮತ್ತು ಉಸಿರಾಟದ ತೊಂದರೆ.

**

ತಂಬಾಕು ಸೇವನೆಯಿಂದ ಸಾವಿಗೀಡಾಗುವವರ ಸಂಖ್ಯೆಗಿಂತ ವಾಯುಮಾಲಿನ್ಯದಿಂದ ಮೃತಪಡುವವರ ಸಂಖ್ಯೆ ಹೆಚ್ಚು. ಧೂಮಪಾನವನ್ನು ತಡೆಗಟ್ಟಬಹುದು. ಆದರೆ, ವಾಯುಮಾಲಿನ್ಯ ನಿಯಂತ್ರಣ ಸಾಧ್ಯವಾಗುತ್ತಿಲ್ಲ 
–ಥಾಮಸ್‌ ಮುಂಝೆಲ್‌, ಜರ್ಮನಿಯ ಮೈಂಝ್‌ ವೈದ್ಯಕೀಯ ವಿವಿ ಪ್ರೊಫೆಸರ್‌ 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !