‘ವಾಯುಮಾಲಿನ್ಯ ತಗ್ಗಿಸಿದರೆ ಅಕಾಲಿಕ ಮರಣ ತಪ್ಪಿಸಬಹುದು’

ಶನಿವಾರ, ಏಪ್ರಿಲ್ 20, 2019
28 °C

‘ವಾಯುಮಾಲಿನ್ಯ ತಗ್ಗಿಸಿದರೆ ಅಕಾಲಿಕ ಮರಣ ತಪ್ಪಿಸಬಹುದು’

Published:
Updated:
Prajavani

ಬರ್ಲಿನ್‌: ಭಾರತ, ಆಫ್ರಿಕಾ ಮತ್ತು ಚೀನಾ ಸೇರಿದಂತೆ ವಿಶ್ವದಾದ್ಯಂತ ವಾಯುಮಾಲಿನ್ಯ ಪ್ರಮಾಣ ಕಡಿತಗೊಳಿಸಿದರೆ ಪ್ರತಿ ವರ್ಷ ಲಕ್ಷಾಂತರ ಮಂದಿಯ ಅಕಾಲಿಕ ಮರಣವನ್ನು ತಪ್ಪಿಸಬಹುದು ಎಂದು ಅಧ್ಯಯನವೊಂದು ಹೇಳಿದೆ.

ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್‌ ಸಂಸ್ಥೆಯ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ನವೀಕರಿಸಲಾಗದ ಇಂಧನಗಳ ಮಿತಿಮೀರಿದ ಬಳಕೆಯಿಂದ ವಾಯುಮಾಲಿನ್ಯ ಪ್ರಮಾಣ ಮಿತಿಮೀರಿ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.

ಈ ವಾಯುಮಾಲಿನ್ಯವು ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಂಧನಗಳ ಅತಿಯಾದ ಬಳಕೆಯಿಂದ ವಾತಾವರಣ ಸೇರುತ್ತಿರುವ ವಿಷಕಾರಿ ಅನಿಲ ಶೇ 65ರಷ್ಟು ಅಕಾಲಿಕ ಸಾವಿಗೆ ಕಾರಣವಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.

ವಿಷಯುಕ್ತ ವಾತಾವರಣವು ಜನರಲ್ಲಿ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತಿದೆ. ಇದರಿಂದ ವಿಶ್ವದಾದ್ಯಂತ ವರ್ಷಕ್ಕೆ 30 ಲಕ್ಷ ಜನ ಅಕಾಲಿಕವಾಗಿ ಸಾವಿಗೀಡಾಗುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !