ಏರ್‌ ಷೋ; ಮಾಂಸ ಮಾರಾಟ ನಿಷೇಧ

7

ಏರ್‌ ಷೋ; ಮಾಂಸ ಮಾರಾಟ ನಿಷೇಧ

Published:
Updated:

ಬೆಂಗಳೂರು: ಯಲಹಂಕ ವ್ಯಾಪ್ತಿಯಲ್ಲಿ ಫೆ. 1ರಿಂದ 28ರವರೆಗೆ ಮಾಂಸ ಮಾರಾಟ ನಿಷೇಧಿಸಲಾಗಿದೆ. ಇಲ್ಲಿನ ವಾಯುನೆಲೆಯಲ್ಲಿ ಫೆ. 20ರಿಂದ 24ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಅದು ಸುಗಮವಾಗಿ ನಡೆಯುವ ಉದ್ದೇಶದಿಂದ ಈ ನಿಷೇಧ ಹೇರಲಾಗಿದೆ. 

ಮಾಂಸಕ್ಕಾಗಿ ಹದ್ದು, ಕಾಗೆ ಇತರ ಪಕ್ಷಿಗಳು ಈ ಪ್ರದೇಶದಲ್ಲಿ ಹಾರಾಡಿದರೆ ವಿಮಾನ ಹಾರಾಟಕ್ಕೆ ಅಡ್ಡಿಯಾಗಲಿದೆ. 

‘ವಾಯುನೆಲೆ ಸುತ್ತಮುತ್ತಲಿನ ಪ್ರದೇಶಗಳಾದ ಬಾಗಲೂರು ಕ್ರಾಸ್‌, ವಿನಾಯಕ ನಗರ, ಪುಟ್ಟೇನಹಳ್ಳಿ, ಕಟ್ಟಿಗೇನಹಳ್ಳಿ ಪ್ರದೇಶಗಳಲ್ಲಿ ವಾಯುನೆಲೆಯ ಅಧಿಕಾರಿಗಳು ಗುರುತಿಸಿದ ಮಾಂಸದ ಅಂಗಡಿ, ಆಹಾರ ಮಾರಾಟ ಕೇಂದ್ರ ಮತ್ತು ಡಾಬಾಗಳನ್ನು ಮುಚ್ಚಬೇಕು’ ಎಂದು ಬಿಬಿಎಂ‍ಪಿಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ. 

‘ಫೆ. 13ರಿಂದ 28ರವರೆಗೆ ವಾಯುನೆಲೆಯ 10 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಎಲ್ಲ ಮಾಂಸ ಮಾರಾಟ, ಆಹಾರ ಕೇಂದ್ರಗಳನ್ನು ಮುಚ್ಚಬೇಕು. ಸಂಚಾರಿ ಆಹಾರ ಕೇಂದ್ರಗಳನ್ನೂ ತೆರೆಯುವಂತಿಲ್ಲ’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !