ಏರ್‌ಪೋರ್ಟ್‌ ‘ಎಕ್ಸ್‌ಪ್ರೆಸ್ ಲೇನ್’ ಬಳಕೆಗೆ ಮುಕ್ತ

ಶುಕ್ರವಾರ, ಏಪ್ರಿಲ್ 26, 2019
35 °C

ಏರ್‌ಪೋರ್ಟ್‌ ‘ಎಕ್ಸ್‌ಪ್ರೆಸ್ ಲೇನ್’ ಬಳಕೆಗೆ ಮುಕ್ತ

Published:
Updated:

ಬೆಂಗಳೂರು: ಹ್ಯಾಂಡ್‌ ಬ್ಯಾಗ್‌ ಹೊಂದಿರುವ ಪ್ರಯಾಣಿಕರ ತಡೆರಹಿತ ಪ್ರವೇಶಕ್ಕಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೆರೆದಿರುವ ‘ಎಕ್ಸ್‌ಪ್ರೆಸ್ ಲೇನ್’ ಬಾಗಿಲನ್ನು ಬಳಕೆಗೆ ಮುಕ್ತಗೊಳಿಸಲಾಗಿದೆ.

‘ಪ್ರಯಾಣಿಕರು ಮಂಗಳವಾರದಿಂದ ಲೇನ್‌ ಬಳಕೆ ಮಾಡುತ್ತಿದ್ದು, ಈ ಹೊಸ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದು ವಿಮಾನ ನಿಲ್ದಾಣದ ಪ್ರತಿನಿಧಿ ತಿಳಿಸಿದ್ದಾರೆ.

‘ವಿಮಾನದ ಸೀಟಿನ ಮೇಲ್ಭಾಗದಲ್ಲಿ (ಓವರ್‌ಹೆಡ್ ಬಿನ್) ಇರಿಸಬಹುದಾದ ಬ್ಯಾಗ್‌ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರತ್ಯೇಕವಾಗಿ ‘ಎಕ್ಸ್‌ಪ್ರೆಸ್ ಲೇನ್’ ಅಳವಡಿಸಲಾಗಿದೆ’ ಎಂದಿದ್ದಾರೆ.

‘ಈ ಲೇನ್‌ಗಳಲ್ಲಿ ಸ್ವಯಂಚಾಲಿತ ಕಿಯೋಸ್ಕ್‌ಗಳಿದ್ದು, ಪ್ರಯಾಣಿಕರು ಅದರ ಮೂಲಕ ಬೋರ್ಡಿಂಗ್‌ ಜಾಗ ತಲುಪಬಹುದು. ಈ ಲೇನ್‌ನಿಂದ ಹ್ಯಾಂಡ್‌ಬ್ಯಾಗ್‌ ಹೊಂದಿರುವ ಪ್ರಯಾಣಿಕರು ಭದ್ರತಾ ತಪಾಸಣೆಗಾಗಿ ಸರತಿಯಲ್ಲಿ ನಿಲ್ಲುವುದು ತಪ್ಪಲಿದೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !