ಗುಪ್ತಾಂಗದಲ್ಲಿ ಚಿನ್ನ ಸಾಗಣೆ: ಮಹಿಳೆಯರು ವಶಕ್ಕೆ

7

ಗುಪ್ತಾಂಗದಲ್ಲಿ ಚಿನ್ನ ಸಾಗಣೆ: ಮಹಿಳೆಯರು ವಶಕ್ಕೆ

Published:
Updated:

ಬೆಂಗಳೂರು: ಗುಪ್ತಾಂಗದಲ್ಲಿ ಚಿನ್ನವಿಟ್ಟುಕೊಂಡು ಸಾಗಣೆ ಮಾಡುತ್ತಿದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, 496 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.

’ಶ್ರೀಲಂಕಾದಿಂದ ವಿಮಾನದಲ್ಲಿ ನಿಲ್ದಾಣಕ್ಕೆ ಬಂದಿಳಿದಿದ್ದ ಮಹಿಳೆಯರನ್ನು ಭದ್ರತಾ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಅವರ ಬಳಿ ಚಿನ್ನವಿರುವುದು ಗೊತ್ತಾಗಿತ್ತು’ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

‘ಮೂವರು ಮಹಿಳೆಯರು ಗುಪ್ತಾಂಗದಲ್ಲಿ ಚಿನ್ನ ಬಚ್ಚಿಟ್ಟುಕೊಂಡಿದ್ದರು. ವೈದ್ಯರ ಸಹಾಯದಿಂದ ಅದನ್ನು ಹೊರಗೆ ತೆಗೆಯಲಾಯಿತು. ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದಿವೆ. 

200 ಗ್ರಾಂ ಚಿನ್ನ ಜಪ್ತಿ: ‘ಆಂಧ್ರ ಪ್ರದೇಶದಿಂದ ಬಂದಿದ್ದ ಇನ್ನೊಬ್ಬ ಪ್ರಯಾಣಿಕನ ಬಳಿ 200 ಗ್ರಾಂ ಚಿನ್ನ ಸಿಕ್ಕಿದೆ. ಆತನನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

  • 6

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !