ಮಂಗಳವಾರ, ನವೆಂಬರ್ 19, 2019
22 °C

ತಮಿಳು ಸಿನಿಮಾದಲ್ಲಿ ಅಜಯ್‌ ಖಳನಾಯಕ

Published:
Updated:
Prajavani

ಅಜಿತ್‌ ಅವರ ‘ತಲ 60’ ಚಿತ್ರದಲ್ಲಿ ಬಾಲಿವುಡ್‌ ನಟ ಅಜಯ್‌ ದೇವಗನ್‌ ಖಳನಾಯಕನ ಪಾತ್ರ ಮಾಡಲಿದ್ದಾರೆ.

ಈ ಚಿತ್ರವನ್ನು  ನಿರ್ದೇಶನ ಮಾಡುತ್ತಿರುವ ಎಚ್‌.ವಿನೋದ್‌ ಅವರು ವಿಲನ್‌ ಪಾತ್ರಕ್ಕಾಗಿ ಅಜಯ್‌ ಅವರನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಬಿ–ಟೌನ್‌ನಲ್ಲಿ ಈ ಸುದ್ದಿಯದೇ ಹವಾ ಈಗ. 

ಇದು ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. ‘ನೆರಕೊಂಡ ಪರವೈ’ ಚಿತ್ರದ ಯಶಸ್ಸಿನಲ್ಲಿ ಬೀಗುತ್ತಿರುವ ಬೋನಿ ಕಪೂರ್‌ ಅವರೇ ಈ ಚಿತ್ರವನ್ನೂ ನಿರ್ಮಾಣ ಮಾಡಲಿದ್ದಾರೆ.

ಈ ಚಿತ್ರಕ್ಕಾಗಿ ಅಜಿತ್‌ ಈಗಾಗಲೇ ಸಣ್ಣಗಾಗಿದ್ದಾರೆ, ಕೂದಲನ್ನು ಕಪ್ಪು ಮಾಡಿಕೊಂಡಿದ್ದಾರೆ. ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಅಜಿತ್‌ ನಟಿಸಲಿದ್ದಾರೆ.

ಅಜಯ್‌ ದೇವಗನ್‌ ಅವರನ್ನು ‘ಇಂಡಿಯನ್‌ 2’ ಚಿತ್ರದಲ್ಲಿ ನಟಿಸುವಂತೆ ಚಿತ್ರತಂಡ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಅವರು ರಾಜಮೌಳಿ ಅವರ ‘ಆರ್‌ಆರ್‌ಆರ್‌ ’ಚಿತ್ರಕ್ಕೆ ಈಗಾಗಲೇ ಡೇಟ್ಸ್‌ ನೀಡಿರುವುದರಿಂದ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಹೀಗಾಗಿ ಒಂದು ವೇಳೆ ಅಜಯ್ ‘ತಲ 60’ ಚಿತ್ರದಲ್ಲಿ ನಟಿಸಿದರೆ ಇದು ಅವರ ಮೊದಲ ತಮಿಳು ಚಿತ್ರ.

 

ಪ್ರತಿಕ್ರಿಯಿಸಿ (+)