ಬುಧವಾರ, ಅಕ್ಟೋಬರ್ 16, 2019
28 °C

ನವರಾತ್ರಿಗೆ ‘ಲಕ್ಷ್ಮಿ ’ ವಿಶೇಷ ಲುಕ್‌

Published:
Updated:
Prajavani

ನಟ ಅಕ್ಷಯ್‌ಕುಮಾರ್‌ ತಮ್ಮ ಮುಂದಿನ ಚಿತ್ರದ ‘ಲಕ್ಷ್ಮಿ ಬಾಂಬ್‌’ ಚಿತ್ರದ ಹೊಸ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  ಈ ಚಿತ್ರದಲ್ಲಿ ಮೊದಲ ಬಾರಿಗೆ ಅಕ್ಷಯ್‌ ತೃತೀಯ ಲಿಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ರಾಘವ ಲಾರೆನ್ಸ್‌ ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಚಿತ್ರವು ಮುಂದಿನ ವರ್ಷ ಈದ್‌ಗೆ ಬಿಡುಗಡೆಯಾಗಲಿದೆ. ‘ನವರಾತ್ರಿ ಎಂಬುದು ಅಗಾಧ ಶಕ್ತಿಯನ್ನು ಪೂಜಿಸುವ ಹಬ್ಬ. ಇಂತಹ ಸುಸಮಯದಲ್ಲಿ ‘ಲಕ್ಷ್ಮಿ ಬಾಂಬ್‌’ ಸಿನಿಮಾದಲ್ಲಿ ನಾನು ಮಾಡುತ್ತಿರುವ ಲಕ್ಷ್ಮಿ ಪಾತ್ರದ ಫೋಟೊವೊಂದನ್ನು ಹಂಚಿಕೊಳ್ಳುತ್ತಿದ್ದೇನೆ.  ಈ ಪಾತ್ರ ನಿರ್ವಹಿಸಲು ನನಗೆ ಎಕ್ಸೈಟ್‌ಮೆಂಟ್‌ ಹಾಗೂ ನರ್ವಸ್‌ ಎರಡೂ ಇದೆ’ ಎಂದು ಬರೆದುಕೊಂಡಿದ್ದಾರೆ.

ಆಕ್ಷಯ್‌ಕುಮಾರ್‌ ಹಂಚಿಕೊಂಡಿರುವ ಚಿತ್ರದಲ್ಲಿ ಕೆಂಪು ಸೀರೆ ಉಟ್ಟಿಕೊಂಡಿರುವ ಅಕ್ಷಯ್‌, ದೇವಿಯ ಮೂರ್ತಿಯ ಎದುರು ನಿಂತಿದ್ದಾರೆ. ಕೈತುಂಬಾ ಕೆಂಪು ಬಳೆ ತೊಟ್ಟು ರೌದ್ರಾವತಾರದಲ್ಲಿ ಕಾಣಿಸಿದ್ದಾರೆ. ಈ ಚಿತ್ರಕ್ಕೆ ‘ಹೌಸ್‌ಫುಲ್‌ 4’ ನಿರ್ದೇಶಕ ಫರ್ಹಾದ್‌ ಶಾಮ್‌ಜೀ ಅವರು ಚಿತ್ರಕತೆ ಬರೆದಿದ್ದಾರೆ. ಈ ಚಿತ್ರ ತಮಿಳು ಚಿತ್ರ ಕಾಂಚನಾ ರಿಮೇಕ್‌. ಈ ಚಿತ್ರದಲ್ಲೂ ಅಮಿತಾಭ್‌ ಬಚ್ಚನ್‌ ಅವರೂ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ.

ಚಿತ್ರವನ್ನು ತುಷಾರ್‌ ಕಪೂರ್‌ ಹಾಗೂ ಶಬೀನಾ ಖಾನ್‌ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಆರ್‌. ಮಾಧವನ್‌ ಹಾಗೂ ನಟಿ ಶೋಭಿತಾ ಧುಲಿಪಾಳ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: 2020 ಬಾಲಿವುಡ್ ನಟ ಅಕ್ಷಯ್ ಕುಮಾರ್ ಅದೃಷ್ಟದ ವರ್ಷ

Post Comments (+)