ಒಂದನೇ ತರಗತಿಯಿಂದಲೇ ಎಲ್ಲ ಶಿಕ್ಷಣ ದೊರೆಯಲಿ

7

ಒಂದನೇ ತರಗತಿಯಿಂದಲೇ ಎಲ್ಲ ಶಿಕ್ಷಣ ದೊರೆಯಲಿ

Published:
Updated:

ಬೆಂಗಳೂರು: ಶಿಕ್ಷಣದ ಬುನಾದಿ ಗಟ್ಟಿಯಾಗಲು ಇಂಗ್ಲಿಷ್‌ ಬೇಕು. ಆದರೆ, ಇಂಗ್ಲಿಷ್‌ ಹೆಸರಿನ ಗುಲಾಮಗಿರಿ ಅಲ್ಲ ಎಂದು ಲೇಖಕಿ ಬಿ.ಟಿ.ಲಲಿತಾ ನಾಯಕ್‌ ಹೇಳಿದರು.

ಬಹುಜನ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ದುರ್ಬಲಗೊಳಿಸಲ್ಪಟ್ಟ ಸರ್ಕಾರಿ ಶಾಲೆಗಳ ಸಬಲೀಕರಣ ‘ರಾಜ್ಯ ಸರ್ಕಾರದ ನಡೆ’ ಕುರಿತ ಸಮಾಲೋಚನಾ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು.

‘ಎಲ್ಲಿಯವರೆಗೆ ಅನ್ಯಾಯ ಸಹಿಸಿಕೊಳ್ಳುತ್ತೇವೋ ಅಲ್ಲಿಯವರೆಗೆ ದಾಸ್ಯದಿಂದ ಹೊರಬರಲು ಅಸಾಧ್ಯ. ಒಂದನೇ ತರಗತಿಯಿಂದಲೇ ಎಲ್ಲ ರೀತಿಯ ಶಿಕ್ಷಣ ಪಡೆಯುವಂತಾಗಬೇಕು. ಖಾಸಗಿ ಶಾಲೆಗಳನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ಶ್ರೀಮಂತರು ಕೂಡಾ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತಾಗಬೇಕು’ ಎಂದರು. 

ದಲಿತ ಚಿಂತಕ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ‘ಸರ್ಕಾರಿ ಶಾಲೆಗಳ ಸಬಲೀಕರಣ ಎಂದರೆ ಕನ್ನಡ ಶಾಲೆಗಳ ಸಬಲೀಕರಣ. ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಭರದಲ್ಲಿ ಕನ್ನಡದ ಮೇಲೆ ಹಾಗೂ ಆ ಭಾಷೆಯ ಬೌದ್ಧಿಕತೆ ಮೇಲೆ ಪ್ರಹಾರವಾಗಿದೆ. ರಾಜ್ಯದಲ್ಲಿ ಈಗಾಗಲೇ 11,500 ಸರ್ಕಾರಿ ಶಾಲೆಗಳು ಮುಚ್ಚಿವೆ. 30 ಸಾವಿರ ಶಾಲೆಗಳನ್ನು ಮುಚ್ಚಲು ಗುರುತಿಸಲಾಗಿದೆ. ನವಬಂಡವಾಳಶಾಹಿ ವ್ಯವಸ್ಥೆಯನ್ನು ಸರ್ಕಾರ ಪೋಷಿಸುತ್ತಿದೆ. ಕನ್ನಡ ದೇವತೆ ಮೇಲೆ ಇಂಗ್ಲಿಷನ್ನು ಆವಾಹಿಸುವ ಪ್ರಯತ್ನ ಸಾಗಿದೆ. ಇಂಗ್ಲಿಷ್‌ ಶಿಕ್ಷಣ ನಮಗೆ ಬೇಡ. ಆದರೆ, ಶಿಕ್ಷಣದಲ್ಲಿ ಇಂಗ್ಲಿಷ್‌ ಬೇಕು’ ಎಂದು ಅವರು ಆಗ್ರಹಿಸಿದರು.

ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್‌.ಎಂ.ಎನ್‌.ರಮೇಶ್‌, ಡಾ.ಎಚ್‌.ಆರ್‌.ಸುರೇಂದ್ರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !