ಪಾನಮತ್ತರಾಗಿ ಚಾಲನೆ: ಆಂಬುಲೆನ್ಸ್ ಚಾಲಕ ವಶಕ್ಕೆ

ಶನಿವಾರ, ಮೇ 25, 2019
25 °C

ಪಾನಮತ್ತರಾಗಿ ಚಾಲನೆ: ಆಂಬುಲೆನ್ಸ್ ಚಾಲಕ ವಶಕ್ಕೆ

Published:
Updated:

ಬೆಂಗಳೂರು: ಪಾನಮತ್ತರಾಗಿ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಆರೋಪದಡಿ ಸಂದೀಪ್ ಪಾಟೀಲ್ (26) ಎಂಬುವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಮಹಾರಾಷ್ಟ್ರದ ಸಂದೀಪ್, ಗುರುವಾರ ರಾತ್ರಿ 9.30ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯಿಂದ ಮಡಿವಾಳ ಕಡೆಗೆ ಸೈರನ್ ಮೊಳಗಿಸುತ್ತ ಆಂಬುಲೆನ್ಸ್‌ ಚಲಾಯಿಸಿಕೊಂಡು ಹೊರಟಿದ್ದಾಗಲೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ’ ಎಂದು ಮಡಿವಾಳ ಸಂಚಾರ ಪೊಲೀಸರು ಹೇಳಿದರು.

‘ಆಂಬುಲೆನ್ಸ್‌ನಲ್ಲಿ ರೋಗಿ ಇಲ್ಲದಿದ್ದರೂ ಚಾಲಕ ಸೈರನ್ ಹಾಕಿಕೊಂಡು ತೆರಳುತ್ತಿದ್ದರು. ಬೊಮ್ಮನಹಳ್ಳಿ ಸಿಗ್ನಲ್ ಬಳಿ ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದರು. ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ದಟ್ಟಣೆ ಉಂಟಾಗಿತ್ತು. ಆಂಬುಲೆನ್ಸ್ ಬೆನ್ನಟ್ಟಿದ್ದ ಕೆಲ ಸಾರ್ವಜನಿಕರು, ರಸ್ತೆ ಮಧ್ಯೆಯೇ ತಡೆದು ನಿಲ್ಲಿಸಿದ್ದರು. ಸ್ಥಳಕ್ಕೆ ಹೋದ ಠಾಣೆಯ ಸಿಬ್ಬಂದಿ, ತಪಾಸಣೆ ನಡೆಸಿದಾಗ ಚಾಲಕ ಮದ್ಯ ಕುಡಿದಿದ್ದು ಗೊತ್ತಾಯಿತು’ ಎಂದರು.

’ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆಂಬುಲೆನ್ಸ್ ಜಪ್ತಿ ಮಾಡಲಾಗಿದೆ. ಅದರ ಮಾಲೀಕರಿಗೂ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಪೊಲೀಸರು ವಿವರಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !