ಬುಧವಾರ, ನವೆಂಬರ್ 20, 2019
21 °C
ವಿಶ್ವ ಬಾಕ್ಸಿಂಗ್‌

ಪಂಘಲ್‌ ಪ್ರಿಕ್ವಾರ್ಟರ್‌ಫೈನಲ್‌ಗೆ

Published:
Updated:
Prajavani

ಏಕ್ತರಿನ್‌ಬರ್ಗ್‌, ರಷ್ಯಾ: ಏಷ್ಯನ್‌ ಚಾಂಪಿಯನ್‌ ಭಾರತದ ಅಮಿತ್‌ ಪಂಘಲ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಿಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 52 ಕೆಜಿ ವಿಭಾಗದ ಮೊದಲ ಸುತ್ತಿನ ಬೌಟ್‌ನಲ್ಲಿ ಶನಿವಾರ ಅವರು ಚೀನಾ ತೈಪೆಯ ಟು ‍ಪೊ–ವೇಯ್‌ ವಿರುದ್ಧ ಸುಲಭ ಜಯ ಸಂಪಾದಿಸಿದರು.

23 ವರ್ಷದ ಪಂಘಲ್‌ 5–0ಯಿಂದ ಎದುರಾಳಿಯನ್ನು ಮಣಿಸಿದರು. ಮೊದಲ ಸುತ್ತಿನಲ್ಲಿ ಅವರಿಗೆ ಬೈ ಸಿಕ್ಕಿತ್ತು. ಈ ಬೌಟ್‌ನಲ್ಲಿ ಪಂಘಲ್‌ ತೀಕ್ಷ್ಣ ಹಾಗೂ ಆಕ್ರಮಣಕಾರಿ ಆಟದ ಮೂಲಕ ಗಮನಸೆಳೆದರು.

ಹ್ಯಾಂಬರ್ಗ್‌ನಲ್ಲಿ ನಡೆದ ಹೋದ ಆವೃತ್ತಿಯ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಟು ಕ್ವಾರ್ಟರ್‌ಫೈನಲ್‌ ತಲುಪಿದ್ದರು. ಹಾಲಿ ಚಾಂಪಿಯನ್‌ ಹಸನ್‌ಬಾಯ್‌ ದುಸ್ಮತೊವ್‌ ವಿರುದ್ಧ ಅಂದು ಪಂಘಲ್‌ ಸೋತಿದ್ದರು. 

 

ಪ್ರತಿಕ್ರಿಯಿಸಿ (+)