ಪಾಕ್‌ ಪರ ಹ್ಯಾಕರ್‌ಗಳಿಂದ ಬಿಗ್‌ಬಿ ಟ್ವಿಟ್ಟರ್‌ ಖಾತೆಗೆ ಕನ್ನ: ಸರಣಿ ಟ್ವೀಟ್‌ 

ಬುಧವಾರ, ಜೂನ್ 26, 2019
23 °C

ಪಾಕ್‌ ಪರ ಹ್ಯಾಕರ್‌ಗಳಿಂದ ಬಿಗ್‌ಬಿ ಟ್ವಿಟ್ಟರ್‌ ಖಾತೆಗೆ ಕನ್ನ: ಸರಣಿ ಟ್ವೀಟ್‌ 

Published:
Updated:

ನವದೆಹಲಿ: ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಬ್‌ ಬಚ್ಚನ್‌ ಅವರ ಟ್ವಿಟರ್‌ ಅಕೌಂಟ್‌ @SrBachchan ಅನ್ನು ಪಾಕಿಸ್ತಾನ ಪರ ಹ್ಯಾಕರ್‌ಗಳು ಸೋಮವಾರ ಮಧ್ಯರಾತ್ರಿ ಹ್ಯಾಕ್‌ ಮಾಡಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಅಲ್ಲದೆ, ಪ್ರೊಫೈಲ್‌ ಪಿಕ್ಚರ್‌ ಬದಲಾಯಿಸಿ ಆ ಜಾಗಕ್ಕೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಚಿತ್ರ ಹಾಕಿದ್ದಾರೆ. 

‘ಐಯ್ಲ್‌ದಿಜ್‌ ಟೀಮ್‌ ಟರ್ಕಿಶ್‌ ಸೈಬರ್‌ ಆರ್ಮಿ’ ಎಂಬ ತಂಡವೊಂದು ಈ ಕೃತ್ಯ ಎಸಗಿದಿದೆ. ಹ್ಯಾಕ್‌ ಮಾಡಿದ್ದೂ ಅಲ್ಲದೆ, ಭಾರತ ಸಹ್ಯವೆನಿಸದ ಪೋಸ್ಟ್‌ಗಳನ್ನು ಟ್ವೀಟ್‌ ಮಾಡಿದೆ. 

ಟ್ವೀಟ್‌ ಹ್ಯಾಕ್‌ ಮಾಡುತ್ತಲೇ ಮೊದಲು ಅಮಿತಾಬ್‌ ಬಚ್ಚನ್‌ ಅವರ ಫೋಟೊ ತೆಗೆದು ಹಾಕಲಾಗಿತ್ತು. ಅಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರ ಚಿತ್ರ ಹಾಕಲಾಗಿತ್ತು. ಪ್ರೊಫೈಲ್‌ ಮಾಹಿತಿ ವಿಭಾಗದಲ್ಲಿ  ‘ನಟ... ಉತ್ತಮ ಎಂದು ಈಗಲೂ ಕೆಲವರು ಹೇಳುತ್ತಿದ್ದಾರೆ. ಲವ್‌ ಪಾಕಿಸ್ತಾನ್‌,’ ಎಂದು ಬದಲಿಸಿದ್ದರು. 

ಹ್ಯಾಕ್‌ ಆದ ನಂತರ ಅಮಿತಾಬ್‌ ಬಚ್ಚನ್‌ ಅವರ ಖಾತೆ ಮೂಲಕ ಟ್ವೀಟ್‌ವೊಂದನ್ನು ಪ್ರಕಟಿಸಿ ಅದನ್ನು ಅಕೌಂಟ್‌ನ ಮೇಲ್ಭಾಗದಲ್ಲಿ ಪಿನ್‌ ಮಾಡಲಾಗಿತ್ತು. ಅದರಲ್ಲಿ, ‘ ಜಗತ್ತಿಗೆ ಮುಖ್ಯವಾದ ಸಂದೇಶವಿದು. ಟರ್ಕಿಶ್‌ ಫುಟ್‌ ಬಾಲ್‌ ಆಟಗಾರರಿಗೆ ಇಸ್‌ಲ್ಯಾಂಡ್‌ ಗಣರಾಜ್ಯದಿಂದ ಆದ ಅವಮಾನವನ್ನು ನಾವು ಖಂಡಿಸುತ್ತೇವೆ. ನಾವು ಮೃಧುವಾಗಿ ಮಾತನಾಡುತ್ತೇವೆ. ಆದರೆ, ದೊಡ್ಡ ಬಡಿಗೆಗಳನ್ನು ತರುತ್ತೇವೆ... ಅತಿದೊಡ್ಡ ಸೈಬರ್‌ ದಾಳಿಯ ಎಚ್ಚರಿಕೆಯನ್ನೂ ನಾವು ಈ ಮೂಲಕ ನೀಡುತ್ತಿದ್ದೇವೆ. ಐಯ್ಲ್‌ದಿಜ್‌ ಟೀಮ್‌ ಟರ್ಕಿಶ್‌ ಸೈಬರ್‌ ಆರ್ಮಿ,’ ಎಂದು ಅದರಲ್ಲಿ ಬರೆಯಲಾಗಿತ್ತು. 

ನಂತರದ ಟ್ವೀಟ್‌ನಲ್ಲಿ ಭಾರತದ ಕುರಿತು ಬರೆಯಲಾಗಿತ್ತು. ಭಾರತದಲ್ಲಿ ಮುಸ್ಲೀಮರ ಮೇಲೆ ದಾಳಿ ನಡೆಯುತ್ತಿದೆ ಎಂದು ಅದರಲ್ಲಿ ಹೇಳಲಾಗಿದೆ. ‘ರಂಜಾನ್‌ ಮಾಸಾಚರಣೆಯಲ್ಲಿ ಭಾರತದಲ್ಲಿ ನಿರ್ಧಯವಾಗಿ ಮುಸ್ಲೀಮರ ಮೇಲೆ ದಾಳಿ ನಡೆದಿದೆ. ಇದು ಈ ದಿನಗಳಲ್ಲಿ ಮೊಹಮ್ಮದ್ದನ ಸಮುದಾಯದ ಮೇಲೆ ನಡೆದ ದಾಳಿ. ಭಾರತದಲ್ಲಿನ ಮುಸ್ಲೀಮರನ್ನು ಅಬ್ದುಲ್ಹಾಮ್ಮದ್‌ ನಮಗೆ ಒಪ್ಪಿಸಿದ್ದಾರೆ,’ ಎಂದು ಅದರಲ್ಲಿ ಬರೆಯಲಾಗಿದೆ. 

ಈ ಬೆಳವಣಿಗೆ ಬಗ್ಗೆ ಮಾತನಾಡಿರುವ ಮುಂಬೈ ಪೊಲೀಸ್‌ ವಕ್ತಾರರು, ‘ ಪ್ರಕರಣವನ್ನು ನಾವು ಸೈಬರ್‌ ವಿಭಾಗಕ್ಕೆ ಮಾಹಿತಿ ಒಪ್ಪಿಸಿದ್ದೇವೆ. ತನಿಖೆ ನಡೆಯುತ್ತಿದೆ,’ ಎಂದು ಹೇಳಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !