ADVERTISEMENT

ಬಹುಮಹಡಿ ಕಟ್ಟಡದಲ್ಲಿ ಬಿರುಕು: ಆತಂಕ

​ಪ್ರಜಾವಾಣಿ ವಾರ್ತೆ
Published 29 ಮೇ 2018, 7:17 IST
Last Updated 29 ಮೇ 2018, 7:17 IST
ಧಾರವಾಡ ಉಳವಿ ಬಸವೇಶ್ವರ ದೇವಸ್ಥಾನ ಎದುರಿನ ಶ್ರೀರಾಮ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿರುವ ಬಿರುಕುಬಿಟ್ಟಿರುವ ಕಂಬಗಳು
ಧಾರವಾಡ ಉಳವಿ ಬಸವೇಶ್ವರ ದೇವಸ್ಥಾನ ಎದುರಿನ ಶ್ರೀರಾಮ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿರುವ ಬಿರುಕುಬಿಟ್ಟಿರುವ ಕಂಬಗಳು   

ಧಾರವಾಡ: ಇಲ್ಲಿಯ ಉಳವಿ ಬಸವೇಶ್ವರ ದೇವಸ್ಥಾನ ಎದುರಿನ ‘ಶ್ರೀರಾಮ ರೆಸಿಡೆನ್ಸಿ’ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿರುವ ಎರಡು ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ನಿವಾಸಿಗಳು ಆತಂಕಕ್ಕೆ ಒಳಗಾಗಿ, ಮನೆ ತೊರೆದಿದ್ದಾರೆ.

ಕಂಬಗಳಲ್ಲಿ ಬಿರುಕು ಕಂಡಿದ್ದರಿಂದ ತೀವ್ರವಾಗಿ ಆತಂಕಗೊಂಡ ಅಲ್ಲಿನ ನಿವಾಸಿಗಳು ಮನೆಯಿಂದ ಹೊರ
ಬಂದರು. ಒಟ್ಟು 16 ಕುಟುಂಬಗಳು ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ಅದಿತಿ ಉಗಮಚಂದ್ರ ಜೈನ್‌ ಮಾಲೀ
ಕತ್ವದ ಅಪಾರ್ಟ್‌ಮೆಂಟ್‌ ಇದಾಗಿದೆ. ವಾಸುದೇವ ಮೇಸ್ತ್ರಿ ಬಿಲ್ಡರ್ ಆಗಿದ್ದಾರೆ.

ಕಂಬಗಳಲ್ಲಿ ಬಿರುಕು ಮೂಡಿದ ತಕ್ಷಣ ನಿವಾಸಿಗಳು ಬಿಲ್ಡರ್‌ಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತ
ರಾದ ಬಿಲ್ಡರ್‌ ಸುಮಾರು 200ಕ್ಕೂ ಹೆಚ್ಚು ಸ್ಟೀಲ್ ಪಿಲ್ಲರ್‌ಗಳನ್ನು ಕೆಳಗೆ ನೀಡಿ, ಕಂಬಗಳ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.

ADVERTISEMENT

ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ಕೆಲವು ಮನೆಯವರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಜತೆಗೆ ಗೋಡೆ ಕುಸಿಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಯನಿರ್ವಹಿಸುತ್ತಿದ್ದ ಎಂಜಿನಿಯರ್ ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್ ಬಿರುಕು ಮಾಹಿತಿ ಪಡೆದ ಶಾಸಕ ಅರವಿಂದ ಬೆಲ್ಲದ ಮತ್ತು ವಿದ್ಯಾಗಿರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಮಹಾಂತೇಶ ಹೊಸಪೇಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.