ADVERTISEMENT

ಯಳಂದೂರು: ಕ್ಷಾರೀಯ ಮಣ್ಣಿನಲ್ಲಿ ಕೈತುಂಬಿದ ವರಮಾನ

ಪುರಿ ತಯಾರಿಕೆಗೆ ಬಳಕೆಯಾಗುವ ಕೆಆರ್‌ಎಚ್–4 ಭತ್ತದ ತಳಿ

ನಾ.ಮಂಜುನಾಥ ಸ್ವಾಮಿ
Published 8 ಜನವರಿ 2020, 19:45 IST
Last Updated 8 ಜನವರಿ 2020, 19:45 IST
 ವೈ.ಕೆ.ಮೋಳೆ ಗ್ರಾಮದ ಕೃಷಿಕ ಗುರು ವೆಂಕಟರಾಮು ಅವರು ಬೆಳೆದಿರುವ ಕೆಆರ್‌ಎಚ್‌–4 ಭತ್ತ
 ವೈ.ಕೆ.ಮೋಳೆ ಗ್ರಾಮದ ಕೃಷಿಕ ಗುರು ವೆಂಕಟರಾಮು ಅವರು ಬೆಳೆದಿರುವ ಕೆಆರ್‌ಎಚ್‌–4 ಭತ್ತ   

ಯಳಂದೂರು: ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ವೈ.ಕೆ.ಮೋಳೆಗ್ರಾಮದ ರೈತರು ಗುಣಮಟ್ಟದ ಬೇಸಾಯದಲ್ಲಿ ತೊಡಗಿದ್ದಾರೆ. ಕ್ಷಾರೀಯ ಮಣ್ಣಿನಲ್ಲೂಆರ್ಥಿಕ ಸ್ವಾವಲಂಬನೆ ಕಂಡುಕೊಂಡಿದ್ದಾರೆ. ತಾಲ್ಲೂಕಿನಲ್ಲೇ ಹೆಚ್ಚು ಭತ್ತದಉತ್ಪಾದನೆ ಮಾಡುವ ಮೂಲಕ ಬೇಸಾಯ ವಿಜ್ಞಾನಿಗಳ ಗಮನ ಸೆಳೆದಿದ್ದಾರೆ.

ತಾಲ್ಲೂಕಿನ ಗುರು ವೆಂಕಟರಾಮು ತಮ್ಮ ಹಿಡುವಳಿಯಲ್ಲಿ ಕೆಆರ್‌ಎಚ್‌–4 ಭತ್ತದ ತಳಿಯನ್ನುಪ್ರತಿ ವರ್ಷ ಬಿತ್ತನೆ ಮಾಡುತ್ತಾರೆ. ಎಕರೆವಾರು 35 ಕ್ವಿಂಟಲ್‌ ಉತ್ಪಾದಿಸುವ ಮೂಲಕಅಧಿಕ ಆದಾಯ ಕಂಡುಕೊಂಡಿದ್ದಾರೆ. ಕಳೆ ನಿರ್ವಹಣೆ ಮತ್ತು ಒಳಸುರಿ ವೆಚ್ಚ ಕಡಿಮೆ ಮಾಡಿ,ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಬೇಡಿಕೆ ಇರುವ ಭತ್ತವನ್ನು ಬೆಳೆದುಕೈತುಂಬ ವರಮಾನ ಪಡೆಯುತ್ತಿದ್ದಾರೆ.

‘ಭೂಮಿ ಕೃಷಿಗೆ ಯೋಗ್ಯವಾಗಿರಲಿಲ್ಲ. ಮಣ್ಣಿನಲ್ಲಿ ಸಾವಯವ ಪದಾರ್ಥಗಳು ಸಮೃದ್ಧವಾಗಿಇರಲಿಲ್ಲ. ಸವಳು ಮಣ್ಣಿನಲ್ಲಿ ಬೇರೆ ಬೇಸಾಯ ಪದ್ಧತಿ ಅಳವಡಿಸಲು ಸಾಧ್ಯ ಇರಲಿಲ್ಲ.ಕೃಷಿ ತಜ್ಞರ ಸಲಹೆ ಪಡೆದು ವ್ಯವಸಾಯ ಕೈಗೊಂಡ ಪರಿಣಾಮ ಇಳುವರಿಯಲ್ಲಿ ಹೆಚ್ಚಳವಾಗಿದೆ’ ಎಂದು ವೆಂಕಟರಾಮು ತಿಳಿಸಿದರು.

ADVERTISEMENT

‘ಕೆಆರ್‌ಎಚ್‌–4 ತಳಿ ಪುರಿ, ಅವಲಕ್ಕಿ, ದೋಸೆ ಮತ್ತು ಇಡ್ಲಿಗೆ ಹೇಳಿ ಮಾಡಿಸಿದಂತಿದೆ.ಅಸ್ಸಾಂ, ತಮಿಳುನಾಡಿನ ಮಂದಿ ಮುಂಗಡ ಕೊಟ್ಟು ಕೊಳ್ಳುತ್ತಾರೆ. ಸವಳು ಮತ್ತು ಉಪ್ಪಿನಅಂಶ ಹೆಚ್ಚಿರುವ ಗದ್ದೆಯಲ್ಲಿ ಬೆಳೆದ ಈ ಭತ್ತಕ್ಕೆ ಸಹಜವಾಗಿಯೇ ರುಚಿ ಹೆಚ್ಚಿರುತ್ತದೆ’ ಎಂಬುದು ಇವರ ಅನುಭವದ ಮಾತು.

ವಿಶೇಷ:ಇತರೆ ತಳಿಗಳನ್ನು ನಾಟಿ ಮಾಡಲು ಎಕರೆಗೆ 30 ಕೆಜಿ ಬಿತ್ತನೆ ಭತ್ತ ಬೇಕು.ಕೆಆರ್‌ಎಚ್‌–4 ಕೇವಲ 6–8 ಕೆಜಿ ಸಾಕು. ಕಳೆ ಮತ್ತು ನಿರ್ವಹಣೆಗೆ 7–8 ಆಳುಗಳಬಳಕೆಯಲ್ಲಿ ಮುಗಿಯುತ್ತದೆ. ₹1,000 ವೆಚ್ಚದಲ್ಲೇ ಕಳೆನಾಶದ ಖರ್ಚು ನೀಗುತ್ತದೆ.100–120 ದಿನದಲ್ಲಿ ಕೊಯ್ಲಿಗೆ ಬರುತ್ತದೆ. ಕನಿಷ್ಠ 35 ಕ್ವಿಂಟಲ್‌ ಇಳುವರಿತಂದುಕೊಡುತ್ತದೆ. ಒಳಸುರಿಯ ಖರ್ಚು ಇಳಿಯುತ್ತದೆ.

‘ಬೇಸಾಯ ತಜ್ಞರ ಸಲಹೆ ಮೇರೆಗೆ ಸಮಗ್ರ ಕೃಷಿ ಅಳವಡಿಸಿ 10 ಕೃಷಿಕರು ಗ್ರಾಮದಲ್ಲಿಕೆಆರ್‌ಎಚ್‌–4 ತಳಿಯನ್ನು ನಾಟಿ ಮಾಡುವ ಮೂಲಕ ಉತ್ತಮ ಫಸಲು ಪಡೆದಿದ್ದಾರೆ.ಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರಮತ್ತು ಐಸಿಎಆರ್‌ ಚಾಮರಾಜನಗರ ಇವರ ಸಂಯುಕ್ತ ಆಶ್ರಯದಲ್ಲಿ ಭತ್ತದ ಕ್ಷೇತ್ರೋತ್ಸವಕೈಗೊಂಡು ನೂರಾರು ಬೆಳೆಗಾರರಿಗೆ ಮಾಹಿತಿ ನೀಡಲಾಯಿತು’ ಎಂದು ಗುರು ವೆಂಕಟರಾಮುತಿಳಿಸಿದರು.

‘ಎಕರೆಗೆ 35–40 ಕ್ವಿಂಟಲ್‌ ಇಳುವರಿ’

‘ವೈ.ಕೆ.ಮೋಳೆ ಸುತ್ತಮುತ್ತ ಮಣ್ಣಿನಲ್ಲಿ ಸೂಕ್ಷ್ಮಪೋಷಕಗಳ ಕೊರತೆ ಇದೆ. ಜೈವಿಕ ಗೊಬ್ಬರಮತ್ತು ಜಿಂಕ್‌ ಫಾಸ್ಪೇಟ್ ಸೇರಿಸಿ ನಾಟಿಗೆ ಸಿದ್ಧತೆ ಮಾಡಲಾಯಿತು. ಮಣ್ಣಿಗೆ 200ಗ್ರಾಂ ಅಜೋಸ್ ಸ್ಪಿರುಲಮ್‌ ಮತ್ತು ರಂಜಕ ಕರಗಿಸುವ ಗೊಬ್ಬರಗಳನ್ನು ಸೇರಿಸಿ ಮಣ್ಣಿನಫಲವತ್ತತೆ ವೃದ್ಧಿಸಲಾಯಿತು. ನಂತರ ಕೆಆರ್‌ಎಚ್‌–4 ತಳಿಯನ್ನು ನೀಡಿ ಬೇಸಾಯಕ್ಕೆರೈತರನ್ನು ಉತ್ತೇಜಿಸಲಾಯಿತು. ಈಗ ತಾಕಿನಲ್ಲಿ ಎಕರೆವಾರು 35–40 ಕ್ವಿಂಟಲ್‌ ಭತ್ತ‌ಇಳುವರಿ ಬರುತ್ತಿದೆ’ ಎಂದುಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಭಾಗದ ವಿಜ್ಞಾನಿಸುನಿಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.