ADVERTISEMENT

ಡಬ್ಬಿ ತೂಗು ಹಾಕಿದ್ದು ಏಕೆ?

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 19:30 IST
Last Updated 8 ಏಪ್ರಿಲ್ 2019, 19:30 IST
   

ಮಾ. 26ರ ‘ಕೃಷಿ ಕಣಜ’ದ ‘ಸುಲಭ ಉಪಾಯ’ ಅಂಕಣದಲ್ಲಿ ‘ಹಲಸಿನ ರಕ್ಷಣೆಗೆ ವಿವಿಧ ಉಪಾಯ’ ಕುರಿತು ಮಾಹಿತಿ ಪ್ರಕಟವಾಗಿತ್ತು. ಹಲಸಿನ ಮರಕ್ಕೆ ತಗಡು ಸುತ್ತುವುದು ಮತ್ತು ಕೊಂಬೆಗೆ ಡಬ್ಬ ತೂಗು ಹಾಕುವುದರಿಂದ ಕರಡಿಗಳಿಂದ ಹಣ್ಣುಗಳನ್ನು ರಕ್ಷಿಸಬಹುದು. ಡಬ್ಬ ಶಬ್ಧ ಮಾಡುವುದರಿಂದ, ಕರಡಿಗಳು ಓಡಿ ಹೋಗುತ್ತವೆ ಎಂದು ವಿವರಿಸಲಾಗಿತ್ತು. ಇದಕ್ಕೆ ಕೆಲ ಓದುಗರು ಪ್ರತಿಕ್ರಿಯಿಸಿ, ‘ಕರಡಿ ಮರ ಏರುವುದನ್ನು ತಪ್ಪಿಸಲು ಮರಕ್ಕೆ ತಗಡು ಸುತ್ತಿರುವುದು ಸರಿ. ಆದರೆ, ಡಬ್ಬ ನೇತು ಹಾಕಿರುವ ಉದ್ದೇಶವೇನು?’ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ತುಮಕೂರು ಜಿಲ್ಲೆಯ ತೋವಿನಕೆರೆ ಪಕ್ಕದ ಬರಕ ಗ್ರಾಮದ ರೈತ ದೊಡ್ಡಯ್ಯ ಹೀಗೆ ಹೇಳುತ್ತಾರೆ; ಮರಕ್ಕೆ ತಗಡು ಸುತ್ತುವುದರಿಂದ ಕರಡಿಗಳು ಮರ ಏರುವುದನ್ನು ತಪ್ಪಿಸಬಹುದು. ಆದರೆ, ಕರಡಿ ತೋಟಕ್ಕೆ ಬರದಂತೆ ಮಾಡಲು ಹೀಗೆ ಡಬ್ಬ ತೂಗು ಬಿಟ್ಟಿರುತ್ತಾರೆ. ಈ ಡಬ್ಬ ಗಾಳಿಗೆ ಸದ್ದು ಮಾಡುತ್ತಿದ್ದರೆ, ಕರಡಿಗಳು ತೋಟದತ್ತ ಸುಳಿಯುವುದಿಲ್ಲ. ಈ ಭಾಗದಲ್ಲಿ ಬಹುಪಾಲು ರೈತರು ತೋಟಗಳಲ್ಲೇ ಮನೆ ಮಾಡಿಕೊಂಡಿದ್ದಾರೆ. ಒಮ್ಮೊಮ್ಮೆ ರಾತ್ರಿ ವೇಳೆ ಬೆಳೆಗಳಿಗೆ ನೀರು ಹಾಯಿಸುವುದಕ್ಕಾಗಿ ತೋಟಗಳಲ್ಲಿ ಓಡಾಡುವ ಪ್ರಸಂಗ ಬರುತ್ತದೆ. ಇಂಥ ವೇಳೆ ಕರಡಿಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚು. ಡಬ್ಬ ಶಬ್ಧ ಮಾಡುತ್ತಿದ್ದರೆ, ಕರಡಿಗಳು ತೋಟದತ್ತ ಸುಳಿಯುವುದಿಲ್ಲ. ಅದಕ್ಕೆ ಈ ವಿಧಾನ ಅನುಸರಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT