ADVERTISEMENT

ಎಲ್ಲರ ಮೇಲೂ ಸಿನಿಮಾ, ಸಾಹಿತ್ಯದ ಪ್ರಭಾವ: ಕಾಯ್ಕಿಣಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 15:31 IST
Last Updated 20 ಫೆಬ್ರುವರಿ 2021, 15:31 IST
   

ಶಿವಮೊಗ್ಗ: ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಸಿನಿಮಾ, ಸಾಹಿತ್ಯ ಪ್ರಭಾವ ಇರುತ್ತದೆ. ಅವುಗಳ ಉತ್ತಮ ಅಂಶಗಳು ಮನುಷ್ಯನ ಜೀವನದ ಆಗುಹೋಗುಗಳ ಮೇಲೆ ಗಾಢ ಪರಿಣಾಮ ಬೀರಬಲ್ಲದು ಎಂದು ಕವಿ ಜಯಂತ ಕಾಯ್ಕಿಣಿ ಹೇಳಿದರು.

ಇಲ್ಲಿನ ಮಾನಸ ಟ್ರಸ್ಟ್‌ ಡಾ.ಕಟೀಲ್ ಅಶೋಕ್ ಪೈ ಸ್ಮರಣಾರ್ಥ ನೀಡುವ ‘ಮಾನಸ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿನಿಮಾ ಹಾಗೂ ಸಾಹಿತ್ಯ ಬದುಕಿಗೆ ಅತ್ಯಂತ ಹತ್ತಿರವಾಗಿವೆ. ಪ್ರತಿಯೊಬ್ಬ ಮನುಷ್ಯನೂ ಅರ್ಥೈಸಿಕೊಂಡು ಮನಮಿಡಿಯುವ ವಿಷಯಗಳಾಗಿವೆ. ಸಿನಿಮಾ ರಂಜನೆಯ ಜತೆಗೆ ಸಮಾಜದಲ್ಲಿನ ಆಗು ಹೋಗುಗಳನ್ನು ತೆರೆದಿಡುತ್ತವೆ. ಸಾಹಿತ್ಯ ಭರವಸೆಯ ಬದುಕಿಗೆ ಪೂರಕವಾಗಿದೆ. ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.

ADVERTISEMENT

ಬೆಂಗಳೂರಿನ ಮನೋವೈದ್ಯ ಡಾ.ಸ್ವಾಮಿನಾಥ ಗೋಪಾಲರಾವ್, ನಿಮ್ಹಾನ್ಸ್ ಪ್ರಾಧ್ಯಾಪಕ ಡಾ.ಜಗದೀಶ್ ತೀರ್ಥಹಳ್ಳಿ ಅವರಿಗೆ ತಲಾ ₹ 75 ಸಾವಿರ ನಗದು, ಫಲಕ ಒಳಗೊಂಡ ಮಾನಸ ಪ್ರಸಸ್ತಿ ಪ್ರಸಸ್ತಿ ನೀಡಿ ಪುರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.