ADVERTISEMENT

ಖ್ಯಾತ ಕಲಾವಿದೆ ಜಯಾ ಜವೇರಿ ಕಲಾಕೃತಿಗಳ ಇ–ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 19:30 IST
Last Updated 20 ಅಕ್ಟೋಬರ್ 2020, 19:30 IST
ಸಾಲು ಕಂಬದ ನಡುವೆ ಕಣ್ಣಾಮುಚ್ಚಾಲೆ.ಜಯಾಜವೇರಿ ಅವರ ಕೃತಿ
ಸಾಲು ಕಂಬದ ನಡುವೆ ಕಣ್ಣಾಮುಚ್ಚಾಲೆ.ಜಯಾಜವೇರಿ ಅವರ ಕೃತಿ   
""

ಖ್ಯಾತ ಕಲಾವಿದೆ ಜಯಾ ಜವೇರಿಯವರ 20ನೇ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಇ–ಪ್ರದರ್ಶನಕ್ಕಾಗಿ ಅವರು ಅಪರೂಪದ 20 ಕಲಾಕೃತಿಗಳನ್ನು ರಚಿಸಿದ್ದು, ತಮ್ಮಲ್ಲಿರುವ ಆತ್ಮವಿಶ್ವಾಸ, ಸಂತೃಪ್ತ ಭಾವನೆ ಹಾಗೂ ಆತ್ಮಸ್ಥೈರ್ಯವನ್ನು ಈ ಕಲಾಕೃತಿಗಳ ರಚನೆಯಲ್ಲಿ ಧಾರೆ ಎರೆದಿರುವಾಗಿ ಹೇಳಿಕೊಂಡಿದ್ದಾರೆ.

ಮುಂಬೈ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಜಯಾ, ಈ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ಪ್ರದರ್ಶನ ನಡೆಸಲು ಈ ಮೊದಲು ಉದ್ದೇಶಿಸಿದ್ದರು. ಆದರೆ ಕೋವಿಡ್‌ನಿಂದಾಗಿ ಪರಿಸ್ಥಿತಿ ಬದಲಾಗಿದ್ದರಿಂದ ತಮ್ಮ ಹೊಸ ವೆನ್‌ಸೈಟ್‌ನಲ್ಲಿ ಈ ದಸರಾ ಸಂದರ್ಭದಲ್ಲಿ ಪ್ರದರ್ಶನ ಏರ್ಪಡಿಸಿದ್ದಾರೆ. ಇಡೀ ಜಗತ್ತೇ ನಿಧಾನಗತಿಯಲ್ಲಿ ನಡೆಯುತ್ತಿರುವಾಗ ಈ ಕಲಾಕೃತಿಗಳು ಸಂತಸ, ಆಶಾಕಿರಣ ಹಾಗೂ ಸಕಾರಾತ್ಮಕ ಭಾವನೆಗಳನ್ನು ತಮ್ಮಲ್ಲಿ ಅರಳಿಸಿರುವುದಾಗಿ ಹೇಳುವ ಕಲಾವಿದೆ ಜಯಾ, ಪ್ರತಿಯೊಂದು ಕಲಾಕೃತಿಯೂ ಬದುಕಿನ ಸಂಭ್ರಮವನ್ನು ಎತ್ತಿ ಹಿಡಿಯುವಂಥದ್ದು ಎನ್ನುತ್ತಾರೆ. ಅದು ಕೋತಿಗಳು ಕಂಬಗಳನ್ನು ಹತ್ತುತ್ತಿರುವ ಚಿತ್ರವಿರಲಿ, ಮಕ್ಕಳು ಕಣ್ಣಾಮುಚ್ಚಾಲೆ ಆಡುವ ಚಿತ್ರವಿರಲಿ ಅಥವಾ ದಟ್ಟ ರಂಗಿನಲ್ಲಿ ಅರಳಿದ ಹೂಗಳ ಕಲಾಕೃತಿಯಿರಲಿ ಅಥವಾ ನಿಸರ್ಗದ ಹಸಿರಿನ ರಮಣೀಯತೆ ತೋರಿಸುವ ಪೇಂಟಿಂಗ್‌ ಇರಲಿ.. ಬದುಕಿನಲ್ಲಿ ಖುಷಿಯನ್ನು ಅರಳಿಸುವುದರಲ್ಲಿ ಸಂಶಯವಿಲ್ಲ.

ತಮ್ಮ ವರ್ಣ ಕಲಾಕೃತಿಗಳೊಂದಿಗೆ ಜಯಾಜವೇರಿ

ನೆರಳು ಮತ್ತು ಬೆಳಕಿನ ಸೊಬಗನ್ನು ಕಲಾಕೃತಿಗಳಲ್ಲಿ ಅದ್ಭುತವಾಗಿ ಮೂಡಿಸುವ ಜಯಾ ಅವರು ವಾಸ್ತುಶಿಲ್ಪ ಹಾಗೂ ಪ್ರಕೃತಿಯನ್ನು ವಿವಿಧ ಆಯಾಮಗಳಲ್ಲಿ ಚಿತ್ರಿಸುವುದರಲ್ಲಿ ಎತ್ತಿದ ಕೈ. ಈ ಕಲಾವಿದೆ ಈ ಹಿಂದೆ ನ್ಯೂಯಾರ್ಕ್‌ ಮತ್ತು ಭಾರತದ ವಿವಿಧ ನಗರಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನಗಳನ್ನು ನಡೆಸಿದ್ದಾರೆ.

ADVERTISEMENT

ಅಪರೂಪದ ಈ ಕಲಾಕೃತಿಗಳ ಪ್ರದರ್ಶನವನ್ನು www.jayajaveri.com ನಲ್ಲಿ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.