ADVERTISEMENT

ಅಂತರಾಷ್ಟ್ರೀಯ ಹೆಣ್ಣುಮಗುವಿನ ದಿನ ಇಂದು: ಹೆಣ್ಣು ಮಕ್ಕಳೇ ಮನೆಗೆ ಆಭರಣ!

ಲಿಂಗಸಮಾನತೆ, ಹೆಣ್ಣು ಮಕ್ಕಳ ರಕ್ಷಣೆಯ ಉದ್ದೇಶ

ನಾ.ಮಂಜುನಾಥ ಸ್ವಾಮಿ
Published 11 ಅಕ್ಟೋಬರ್ 2021, 1:57 IST
Last Updated 11 ಅಕ್ಟೋಬರ್ 2021, 1:57 IST
ಪುತ್ರಿಯರಾದ ಸಿ.ಯಮುನಾ ಹಾಗೂ ಸಿ.ಅಶ್ವಿನಿ ಅವರೊಂದಿಗೆ ಲಕ್ಷ್ಮಿ ಚಿಕ್ಕಣಸ್ವಾಮಿ ದಂಪತಿ
ಪುತ್ರಿಯರಾದ ಸಿ.ಯಮುನಾ ಹಾಗೂ ಸಿ.ಅಶ್ವಿನಿ ಅವರೊಂದಿಗೆ ಲಕ್ಷ್ಮಿ ಚಿಕ್ಕಣಸ್ವಾಮಿ ದಂಪತಿ   

ಯಳಂದೂರು:ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ, ಪರಿತಪಿಸುವ ಪೋಷಕರೇ ಹೆಚ್ಚು.ಆದರೆ, ಪುತ್ರಿಯರು ಮನೆಗೆ ಚಂದ್ರನ ಬೆಳಕಿದ್ದಂತೆ. ಅವರಿಗೂ ಸಮಾನ ಶಿಕ್ಷಣ ಮತ್ತುಪ್ರೋತ್ಸಾಹ ನೀಡಿದರೆ ಅಗಾಧವಾದ ಸಾಧನೆ ಮಾಡಬಲ್ಲರು ಎಂಬುದನ್ನು ತಾಲ್ಲೂಕಿನ ಕೆಸ್ತೂರು ಗ್ರಾಮದ ಶಿಕ್ಷಿತ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಸಾಧಿಸಿ ತೋರಿಸಿದ್ದಾರೆ.

ಕೆಸ್ತೂರು ಗ್ರಾಮದ ಚಿಕ್ಕಣಸ್ವಾಮಿ ಅವರು ಮಳವಳ್ಳಿ ಹಲಗೂರು ಕಾಲೇಜಿನಲ್ಲಿಪ್ರಾಂಶುಪಾಲರು. ಪತ್ನಿ ಲಕ್ಷ್ಮಿ ಗೃಹಿಣಿ. ದಂಪತಿಗೆ ಸಿ. ಯಮುನಾ, ಸಿ.ಅಶ್ವಿನಿ ಮತ್ತು ಸಿ.ಭಾರ್ಗವ ಎಂಬ ಮೂವರು ಮಕ್ಕಳು. ದಂಪತಿ ತಮ್ಮ ಇಬ್ಬರು ಪುತ್ರಿಯರ ಆಸಕ್ತಿಕ್ಷೇತ್ರಗಳ ಕಲಿ
ಕೆಗೆ ಕಿವಿಯಾಗಿದ್ದಾರೆ. ಲಿಂಗ ತಾರತಮ್ಯಕ್ಕೆ ಅವಕಾಶ ನೀಡದೆ, ಕನ್ನಡಮಾಧ್ಯಮದಲ್ಲಿ ಶಿಕ್ಷಣ ಕಲ್ಪಿಸಿಕೊಟ್ಟಿದ್ದಾರೆ. ಉನ್ನತ ಶಿಕ್ಷಣಕ್ಕೆ ಅನುಗುಣವಾಗಿಭಾಷೆ ಬದಲಾಗಿದೆ. ಇಬ್ಬರೂ ಪುತ್ರಿಯರ ಅಪೇಕ್ಷೆ ಈಡೇರಿಸಲು ಪ್ರೋತ್ಸಾಹ ನೀಡಿದ್ದಾರೆ.

‘ನಮ್ಮ ಮನೆಯಲ್ಲಿ ಸಹೋದರಿಯರೇ ಹೆಚ್ಚು. ಅವರ ಒಡನಾಟದಲ್ಲಿ ಬೆಳೆದ ನನಗೆ ಪುತ್ರಿಯರಸಾಂಗತ್ಯ ಸಂತಸವನ್ನೇ ತಂದಿದೆ. ಯಮುನಾ ಆರಂಭದಲ್ಲಿ ಪಿಯು ಹಂತದಲ್ಲಿ ವಾಣಿಜ್ಯ ವಿಷಯ ಆಯ್ಕ ಮಾಡುವ ಇಂಗಿತ ವ್ಯಕ್ತಪಡಿಸಿದಳು. ಈ ಹಂತದಲ್ಲಿ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿದ್ದಳು. ನಂತರ ಬಿಕಾಂ ಪದವಿ ಪೂರೈಸುವ ವೇಳೆಗೆ ಸ್ಟೇಟ್ ಅಕೌಂಟ್ಸ್‌ಹುದ್ದೆಗೆ ಆಯ್ಕೆಯಾದಳು. ಈಗ ಚಾಮರಾಜನಗರ ಜಿಲ್ಲಾ ಪಂಚಾಯಿತಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಸರ್ಕಾರಿ ಸೇವೆ ಮಾಡುವ ಅವಕಾಶ ಲಭಿಸಿದೆ. ಆವಳ ಆಸಕ್ತಿಗೆ ನಾವು ತಡೆಯೊಡ್ಡದೆ ಪ್ರೋತ್ಸಾಹ ನೀಡಿದ್ದರಿಂದ ಇದು ಸಾಧ್ಯವಾಗಿದೆ' ಎಂದು ಹೇಳುತ್ತಾರೆ ಚಿಕ್ಕಣಸ್ವಾಮಿ.

ADVERTISEMENT

‘ಸಮಾಜದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಇದ್ದರೆ, ಸಾಮಾಜಿಕ ಸುಧಾರಣೆ ಸುಲಭವಾಗುತ್ತದೆ.ವಿದ್ಯಾವಂತ ನಾರಿಯರು ಮನೆಯ ಆಸ್ತಿ ಮತ್ತು ಆಭರಣ. ತಂದೆ-ತಾಯಿಗಳು ಮಕ್ಕಳ ಇಷ್ಟವನ್ನು ಕೇಳಿ, ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕು.ನಮ್ಮ ಮನೋಧೋರಣೆಗಳನ್ನು ಮಕ್ಕಳ ಮೇಲೆ ಹೇರಬಾರದು’ ಎನ್ನುವುದು ಹೆಣ್ಣುಮಕ್ಕಳ ಪೋಷಕರಿಗೆ ಅವರು ನೀಡುವ ಸಲಹೆ.

‘ಎರಡನೇ ಮಗಳು, ಸಿ.ಅಶ್ವಿನಿ ಸಮಾಜ ಸೇವೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಳು. ಎಸ್ಸೆಸ್ಸೆಲ್ಸಿಯಲ್ಲಿಉನ್ನತ ಶ್ರೇಣಿ ಪಡೆದಿದ್ದಳು. ಪಿಯು ಹಂತದಲ್ಲಿ ವಿಜ್ಞಾನ ಕಲಿತು, ಸಿಇಟಿಯಲ್ಲಿ ಉನ್ನತ ರ‍್ಯಾಂಕ್‌ ಗಳಿಸಿ ಸರ್ಕಾರಿ ಕೋಟಾದಡಿ ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಳು. ಈಗ
ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಪೂರೈಸುತ್ತಿದ್ದಾಳೆ’ ಎಂದು ಲಕ್ಷ್ಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳ ವಿಚಾರದಲ್ಲಿ ಹೆಣ್ಣು ಗಂಡು ಎಂಬ ಭೇದ ಬೇಡ. ಗಂಡಾಗಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಬಾಲ್ಯವಿವಾಹ, ಅಪೌಷ್ಟಿಕತೆ, ತಡೆಗಟ್ಟಬೇಕು. ಪೋಷಕರು ಕೀಳರಿಮೆ ಬೆಳೆಸಿಕೊಳ್ಳದೆ, ಮಕ್ಕಳಸಾಧನೆಗೆ ಮೆಟ್ಟಿಲಾಗಬೇಕು. ಇದರಿಂದ ಸಮಾಜದಲ್ಲಿ ಗೌರವ ಪ್ರಾಪ್ತವಾಗುತ್ತದೆ’ ಎನ್ನುತ್ತಾರೆ ಹೆತ್ತವರು.

ಹೆಣ್ಣು ಮಗುವಿನ ದಿನದ ಮಹತ್ವ

ಜಗತ್ತಿನಾದ್ಯಂತ ಹೆಣ್ಣು ಮಕ್ಕಳು, ಮಹಿಳೆಯರ ಹಕ್ಕುಗಳ ರಕ್ಷಣೆ, ಎಲ್ಲ ಕ್ಷೇತ್ರಗಳಲ್ಲಿ ಲಿಂಗ ಅಸಮಾನತೆ ತೊಡೆದು ಹಾಕುವುದು, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ಜಾಗೃತಿ ಹಾಗೂ ಕಡಿವಾಣ ಹಾಕುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್‌ 11ರಂದು ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಿಸಲಾಗುತ್ತಿದೆ. 2011ರ ಡಿಸೆಂಬರ್‌ 19ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ದಿನದ ಆಚರಣೆ ಬಗ್ಗೆ ನಿರ್ಣಯ ಅಂಗೀಕರಿಸಲಾಗಿತ್ತು.

‘ಡಿಜಿಟಲ್‌ ಪೀಳಿಗೆ, ನಮ್ಮ ಪೀಳಿಗೆ’ ಎಂಬುದು ಈ ವರ್ಷದ ಧ್ಯೇಯವಾಕ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.