ADVERTISEMENT

ಮಳೆ ನೆನಪಿನ ಹನಿಗಳು: ಮಂಗಳೂರಿನ ಸೋನೆಮಳೆ ನೆನೆದ ನಟಿ ಅದ್ವಿತಿ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 19:30 IST
Last Updated 15 ಜುಲೈ 2022, 19:30 IST
ಅದ್ವಿತಿ ಶೆಟ್ಟಿ
ಅದ್ವಿತಿ ಶೆಟ್ಟಿ    

ಮಳೆಗಾಲದ ಹನಿಗಳು ಒಬ್ಬೊಬ್ಬರಿಗೆ ಒಂದೊಂದು ತರಹ. ಬೆಳ್ಳಿ ತೆರೆಯ ಮೇಲೆ ಮಳೆಯಲ್ಲಿ ನೆನೆದವರು, ತಮ್ಮ ಬದುಕಿನ ಮಳೆಯಲ್ಲಿ ಮಿಂದದ್ದು ಹೇಗೆಲ್ಲಾ ಇದೆ. ಬಣ್ಣ, ಬೆಳಕಿನಾಚೆಯ ನಿಜಮಳೆಯ ಸೊಬಗು, ಬದುಕಿನ ಅರ್ಥ ಕಲಿಸಿದ ಮಳೆಯ ಪಾಠಗಳ ಪುಟ್ಟ ಝರಿ ಇಲ್ಲಿದೆ. ನಿಮ್ಮಲ್ಲೂ ಇಂಥ ಕಥೆಗಳಿರಬಹುದಲ್ವಾ... ಓದುತ್ತಾ ನೆನಪಿಸಿಕೊಳ್ಳಿ

ಮಳೆ ಎಂದರೆ ನನಗೆ ಮಂಗಳೂರು ತುಂಬಾ ನೆನಪಾಗುತ್ತದೆ. ಮಂಗಳೂರಿನ ಮಳೆ ಕಾಲ ಕಳೆಯಲು ಒಳ್ಳೆಯದು. ಏಕೆಂದರೆ ಒಮ್ಮೆ ದೋ ಎಂದು ಶುರುವಾದ ಮಳೆ ಬಿಡುವುದೇ ಇಲ್ಲ. ಬೆಂಗಳೂರಿನ ಮಳೆ ಉದ್ಯೋಗಕ್ಕೆ ಒಳ್ಳೆಯದು. ಏಕೆಂದರೆ ಒಮ್ಮೆ ಬಂದು ಆಗಾಗ ಬ್ರೇಕ್‌ ಕೊಟ್ಟು ನಮ್ಮ ಕೆಲಸಗಳು ಮುಂದುವರಿಯಲು ಅವಕಾಶ ಕೊಡುತ್ತದೆ. ವರ್ಕ್‌ಲೈಫ್‌ಗೆ ಬೆಂಗಳೂರಿನ ಮಳೆ ಇಷ್ಟ.

ಮಂಗಳೂರಿನಲ್ಲಿ ಮಳೆನೋಡುತ್ತಾ ಬಿಂದಾಸ್‌ ಆಗಿ ಕಾಲ ಕಳೆಯುತ್ತಿದ್ದೆವು. ಶಾಲೆಗೆ ಹೋಗಿ ಬರುವಾಗ ಅಮ್ಮ ಫಿಷ್‌ ಕಟ್ಲೆಟ್‌, ಸ್ಯಾಂಡ್‌ವಿಚ್‌, ಪಾವ್‌ ಬಾಜಿ ಮಾಡುತ್ತಿದ್ದರು. ಹಾಗೆ ಮಳೆ ಸುರಿಯುವಾಗ ಕೋರಿ ಸುಕ್ಕ, ನೀರ್‌ದೋಸೆ ತಿನ್ನುವುದು ತುಂಬಾ ಇಷ್ಟ.

ADVERTISEMENT

ಬೆಂಗಳೂರಿನ ಮಳೆ ವೇಳೆ ಬಾಲ್ಕನಿಯಲ್ಲಿ ಕುಳಿತು ಬಿಸಿ ಬಿಸಿ ಬಜ್ಜಿ, ಬೋಂಡ ಸವಿಯುತ್ತಾ ಚಹಾ ಕುಡಿಯುವುದು ನನಗಿಷ್ಟ. ಚಹಾ ಅಂತೂ ಬೇಕೇ ಬೇಕು. ಎಷ್ಟೋ ವೇಳೆ ಬೋಂಡ ಬಜ್ಜಿ ತರಿಸಿ ತಿನ್ನುವುದೂ ಇದೆ.

ಬೆಂಗಳೂರಿನ ಮಳೆ ಏನೋ ಇಷ್ಟ. ಆದರೆ, ನಮ್ಮ ರಸ್ತೆ, ಚರಂಡಿಗಳನ್ನು ವ್ಯವಸ್ಥಿತವಾಗಿಡಬೇಕು. ಈ ಅವ್ಯವಸ್ಥೆಯಿಂದ ಮಾತ್ರ ಬೆಂಗಳೂರಿನ ಮಳೆ ಸಮಸ್ಯೆ ಎಂಬಂತೆ ಅನಿಸುತ್ತದೆ. ಸುಮ್ಮನೆ ಮಳೆಯನ್ನೇಕೆ ದೂರಬೇಕು.

ಮಳೆ ಇರಲಿ ಬಿಸಿಲಿರಲಿ. ದೇಹ ಸಹಜವಾಗಿಯೇ ಫಿಟ್‌ ಆಗಿಯೇ ಇದೆ. ಸಣ್ಣ ಪುಟ್ಟ ವ್ಯಾಯಾಮಗಳನ್ನಷ್ಟೇ ಮಾಡುತ್ತೇನೆ. ಹಾಗೆಂದು ತುಂಬಾ ತಲೆಕೆಡಿಸಿಕೊಳ್ಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.