ADVERTISEMENT

ಪುಸ್ತಕ ವಿಮರ್ಶೆ: ಮುಗ್ಧ ಮನಸ್ಸನ್ನು ಅರಳಿಸುವ ಕವಿತೆಗಳು

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 19:31 IST
Last Updated 23 ಜನವರಿ 2021, 19:31 IST
ಅವನೆಲ್ಲಿರುವನು ಹೇಳಮ್ಮ
ಅವನೆಲ್ಲಿರುವನು ಹೇಳಮ್ಮ   

ಅವನೆಲ್ಲಿರುವನು ಹೇಳಮ್ಮ
ಲೇ: ಜಂಬುನಾಥ ಕಂಚ್ಯಾಣಿ
ಪ್ರ: ಮಾನ್ಯತಾ ಪ್ರಕಾಶನ
ಮೊ: 99011 11754

ಮಕ್ಕಳ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರ ಸಂಖ್ಯೆ ಬಲುದೊಡ್ಡದು. ಅದರಲ್ಲೂ ವಿಜಯಪುರ ಜಿಲ್ಲೆಯನ್ನು ಮಕ್ಕಳ ಸಾಹಿತ್ಯದ ತೊಟ್ಟಿಲು ಎಂದು ಕರೆಯುವಷ್ಟು ಆ ಭಾಗದಲ್ಲಿ ಮಕ್ಕಳ ಸಾಹಿತ್ಯದ ಲೇಖಕರಿದ್ದಾರೆ. ಅವರಲ್ಲಿ ಬಹುಪಾಲು ಶಿಕ್ಷಕರು ಎನ್ನುವುದು ವಿಶೇಷ. ಜಂಬುನಾಥ ಕಂಚ್ಯಾಣಿ ಸಹ ಮಕ್ಕಳಿಗಾಗಿ ಕಥೆ, ಶಿಶುಪ್ರಾಸ, ಕವಿತೆ, ನಾಟಕ ಬರೆಯುವುದನ್ನು ತಪಸ್ಸಿನಂತೆ ರೂಢಿಸಿಕೊಂಡು ಬಂದವರಲ್ಲಿ ಒಬ್ಬರು. ಅವರ ಇತ್ತೀಚಿನ ಸಚಿತ್ರ ಮಕ್ಕಳ ಕವಿತೆಗಳ ಕೃತಿಯೇ ‘ಅವನೆಲ್ಲಿರುವನು ಹೇಳಮ್ಮ’.

ಮಕ್ಕಳ ಕಿವಿಗೆ ಮೇಲಿಂದ ಮೇಲೆ ಬೀಳುವ ಪದಗಳನ್ನೇ ಬಳಸಿಕೊಂಡು ಅವರ ಮನ ಗೆಲ್ಲಬಲ್ಲ ಹಲವು ರಚನೆಗಳು ಇದರಲ್ಲಿವೆ. ಇಲ್ಲಿನ ಕವಿತೆಗಳು ತಾಜಾ ಆಗಿವೆ. ಮಕ್ಕಳ ಮುಗ್ಧ ಮನಸ್ಸನ್ನು ಅರಳಿಸುವುದಕ್ಕೆ ಪೂರಕವಾಗಿವೆ. ಅವರ ಕಲ್ಪನೆಗೆ ರೆಕ್ಕೆ ಮೂಡಿಸಲು ಈ ಕವಿತೆಗಳು ಹಾತೊರೆಯುತ್ತವೆ. ‘ಅಜ್ಜಿಯ ಸಂದರ್ಶನ’, ‘ಜಾಣ ಕೋಳಿಮರಿ’, ‘ಹೋಳಿಹಬ್ಬ’ ಕಚಗುಳಿ ಇಡುವ ಕವಿತೆಗಳು. ಹಾಗೆಯೇ ನಾಗಲಿಂಗಪ್ಪ ಬಡಿಗೇರ್‌ ಅವರ ಚಿತ್ರಗಳು ಮನಸೂರೆಗೊಳ್ಳುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.