ADVERTISEMENT

ಮೊದಲ ಓದು: ಸಕ್ಕರೆ ಕಾಯಿಲೆ ಕುರಿತು ಸಮಗ್ರ ವಿವರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 19:30 IST
Last Updated 21 ಆಗಸ್ಟ್ 2021, 19:30 IST
ಸಕ್ಕರೆ ಕಾಯಿಲೆ ಕೃತಿ
ಸಕ್ಕರೆ ಕಾಯಿಲೆ ಕೃತಿ   

ಇಂದಿನ ಸನ್ನಿವೇಶದಲ್ಲಿ ಸಕ್ಕರೆ ಕಾಯಿಲೆ ಪೀಡಿತರಿಲ್ಲದ ಒಂದಾದರೂ ಮನೆ ಸಿಕ್ಕೀತೇ? ಈ ಪ್ರಶ್ನೆಗೆ ಪ್ರಾಯಶಃ ‘ಇಲ್ಲ’ ಎನ್ನುವ ಉತ್ತರವೇ ಸಿಕ್ಕೀತು. ಜಗತ್ತಿನಲ್ಲಿ ಚೀನಾ ಹೊರತುಪಡಿಸಿದರೆ ಅತ್ಯಧಿಕ ಸಕ್ಕರೆ ಕಾಯಿಲೆ ಹೊಂದಿದವರ ದೇಶವೆಂದರೆ ಅದು ಭಾರತ. ದಿನೇ ದಿನೇ ಈ ಸಂಖ್ಯೆ ಏರುತ್ತಲೇ ಇದೆ. ಸಕ್ಕರೆ ಕಾಯಿಲೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವುದನ್ನು ನಾವು ನಿತ್ಯವೂ ನೋಡಬಹುದು. ಇಂತಹ ಸನ್ನಿವೇಶದಲ್ಲಿ ಸಕ್ಕರೆ ಕಾಯಿಲೆಯನ್ನು ನಾವು ಹೇಗೆ ನಿರ್ವಹಿಸಬೇಕು, ಅದರೊಂದಿಗೆ ನಾವು ಆರಾಮವಾದ ಜೀವನವನ್ನು ಹೇಗೆ ಸಾಗಿಸಬೇಕು ಎಂಬ ಮಾಹಿತಿಯೊಂದಿಗೆ ಡಾ.ಎಸ್‌.ಪಿ.ಯೋಗಣ್ಣ ಅವರ ‘ಸಕ್ಕರೆ ಕಾಯಿಲೆ: ಪ್ರಶ್ನೆ–ಉತ್ತರ’ ಕೃತಿ ಹೊರಬಂದಿದೆ.

ವಾಸಿಯಾಗದ ದೀರ್ಘಕಾಲಿಕ ಕಾಯಿಲೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಕಾದ ಅನಿವಾರ್ಯ ಅತಿಥಿಯಂತೆ ಸ್ವೀಕರಿಸಿ, ಉಪಚರಿಸಿ, ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕು ಎನ್ನುವುದು ಲೇಖಕರ ಹಿತನುಡಿ. ಕೃತಿಯಲ್ಲಿ ಅವರು ನೀಡಿರುವ ಸಲಹೆಗಳು ಈ ಆಶಯಕ್ಕೆ ಪೂರಕವಾಗಿವೆ. ಸಕ್ಕರೆ ಕಾಯಿಲೆ ಎಂದರೇನು, ಗ್ಲುಕೋಸ್‌ ಏರಿಳಿತವಾಗುವುದು ಏಕೆ, ಈ ಕಾಯಿಲೆಗೆ ಕಾರಣಗಳು ಏನು, ಇರುವ ವಿಧಗಳು ಯಾವುವು, ಮೂತ್ರಜನಕಾಂಗ, ಕಣ್ಣು, ನರಮಂಡಲದ ಮೇಲೆ ಈ ಕಾಯಿಲೆ ಬೀರುವ ಪರಿಣಾಮಗಳೇನು – ಇವೇ ಮೊದಲಾದ ಪ್ರಶ್ನೆಗಳನ್ನು ಹಾಕಿಕೊಂಡು ಸುದೀರ್ಘವಾಗಿ ಚರ್ಚಿಸಲಾಗಿದೆ. ಔಷಧಿ–ಚಿಕಿತ್ಸೆಗಳ ಕುರಿತು ವಿವರವಾದ ಮಾಹಿತಿ ಒದಗಿಸಲಾಗಿದೆ. ಯೋಗ ಮತ್ತು ವ್ಯಾಯಾಮದ ಮಹತ್ವವನ್ನೂ ತಿಳಿಸಿಕೊಡಲಾಗಿದೆ. ಪ್ರತಿಯೊಂದು ಸಮಸ್ಯೆ, ಪರಿಹಾರದ ಕುರಿತು ಸಚಿತ್ರವಾಗಿ ವಿವರಿಸಲಾಗಿದೆ. ಸಕ್ಕರೆ ಕಾಯಿಲೆ ಕುರಿತು ಮನೆಯಲ್ಲಿ ಇರಬೇಕಾದ ಕೈಪಿಡಿಯಂತೆ ಈ ಕೃತಿ ಭಾಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT