ADVERTISEMENT

ಮಳೆಗಾಲ ಬಂತು ಅಂದ್ರೆ...

ನಿರ್ಮಲಾ ಸುರತ್ಕಲ್
Published 13 ಜೂನ್ 2018, 10:44 IST
Last Updated 13 ಜೂನ್ 2018, 10:44 IST
ಚಿತ್ರ: ಶಿಲ್ಪಾ ಕಬ್ಬಿಣಕಂತಿ
ಚಿತ್ರ: ಶಿಲ್ಪಾ ಕಬ್ಬಿಣಕಂತಿ   

ಮಳೆಗಾಲ ಬಂದೇಬಿಡ್ತು
ಭೂಮಿ, ಬಾನು ಒಂದಾಗ್ಹೋಯ್ತು
ಮೂಗು ಸೊರಭರ ಅಂತಂದ್ಬಿಡ್ತು
ನೆಗಡಿ, ಶೀತ, ಜ್ವರ ಎಲ್ಲ ‘ಹಾಜರ್ ಸರ್! ಯಸ್ ಸರ್!?’

ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಹೊಟ್ಟೆಗೆ ಹೋಯ್ತಾ?
ಮಳೆಯಲಿ ನೆನೆದು ಖುಶಿ ಖುಶಿಯಾಯ್ತಾ?
ಅಂಗಿ, ಡ್ರೆಸ್ಸು ಕಚಿಪಿಚಿಯಾಯ್ತಾ?
ನೆಗಡಿ, ಶೀತ, ಜ್ವರ ಎಲ್ಲ ‘ಮೇ ಐ ಕಮಿನ್ ಸರ್?’

ಔಷಧಿ, ಮಾತ್ರೆ ಬೇಡ ಅಂದ್ಯಾ?
‘ತಿಂದೆ’ ಅಂತ ಸುಳ್ಹೇಳಿದ್ಯಾ?
ತಿನ್ನಲು ಒಪ್ಪದೆ ಹಟ ಹಿಡಿದಿದ್ಯಾ?
ನೆಗಡಿ, ಶೀತ, ಜ್ವರ ಹೇಳ್ತವೆ. ‘ಹೋಗೋದಿಲ್ಲ, ಥ್ಯಾಂಕ್ಯೂ ಸರ್!’

ಥಂಡಿಗೆ ಸಿಲುಕದೆ ಬಿಸಿ ಬಿಸಿ ಉಂಡು,
ಮಳೆಯಲಿ ನೆನೆಯದೆ ಜಾಗ್ರತೆ ನಿಂದು
ದೊಡ್ಡೋರಂದಂತೇನೇ ನಡೆದರೆ
‘ಬಾ, ಬಾ’ ಅಂದ್ರೂ, ಶೀತ, ನೆಗಡಿ, ‘ನಾವು ಬರಲ್ಲ! ಸಾರೀ ಸರ್!?’
‘ನೋ ಸರ್, ಬೈ ಬೈ ಸರ್!?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT