ADVERTISEMENT

ಲೋಕಾಯುಕ್ತಕ್ಕೇಕೆ ರಕ್ಷಣೆ?

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST

ಸಂಸತ್ತಿಗೆ ನೀಡುವ ಭದ್ರತೆಯ ಮಾದರಿಯಲ್ಲೇ ಕರ್ನಾಟಕ ಲೋಕಾಯುಕ್ತ ಕಚೇರಿಗೆ ಭದ್ರತೆ ಒದಗಿಸಲು ಸರ್ಕಾರ ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ?

ಈ ಸರ್ಕಾರವು ಲೋಕಾಯುಕ್ತವನ್ನು ಹಲ್ಲಿಲ್ಲದ ಸಂಸ್ಥೆಯಾಗಿಸಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಹಿಂದೆ ದೇಶಕ್ಕೆ ಮಾದರಿಯಾಗಿತ್ತು. ಅದನ್ನು ಎಷ್ಟು ಸಾಧ್ಯವೋ ಅಷ್ಟು ದುರ್ಬಲಗೊಳಿಸಲಾಗಿದೆ. ಅದರ ಸ್ಥಾನದಲ್ಲಿ ತಾನು ಹೇಳಿದಂತೆ, ತನಗೆ ಅನುಕೂಲವಾಗುವಂತೆ ನಡೆಯುವ ಎ.ಸಿ.ಬಿ. ಎಂಬ ಸಂಸ್ಥೆಯನ್ನು ರೂಪಿಸಿದೆ.

ಕಳೆದ ಒಂದು ವರ್ಷದಲ್ಲಿ ಎ.ಸಿ.ಬಿ. ಮಾಡಿರುವ ಸಾಧನೆಯಾದರೂ ಏನು ಎಂಬುದನ್ನು ಸರ್ಕಾರ ಹೇಳಬೇಕು. ಲೋಕಾಯುಕ್ತ ಸಂಸ್ಥೆ ಬಲಹೀನವಾಗಿದ್ದರಿಂದಲೇ ಲೋಕಾಯುಕ್ತರ ಮೇಲೆ ದಾಳಿ ಆಗಿದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು.
-ಸಂಜು ಎಸ್.ಡಿ., ನಿಡಗುಂದ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.