ADVERTISEMENT

ವೈದ್ಯ ವಿದ್ಯಾರ್ಥಿಗಳ ರಂಗಪ್ರೀತಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 19:31 IST
Last Updated 10 ಏಪ್ರಿಲ್ 2019, 19:31 IST
   

ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) ರಂಗಾಸಕ್ತ ವೈದ್ಯ ವಿದ್ಯಾರ್ಥಿಗಳು ಹುಟ್ಟು ಹಾಕಿದ ’ಮಂಥನ’ ರಂಗ ತಂಡವು ಮಾನಸಿಕ ರೋಗಗಳ ಹತ್ತು, ಹಲವು ಮುಖಗಳ ಕಥೆಯನ್ನು ‘ಮೈಂಡ್‌ ಯೂ’ ಎಂಬ ಹೆಸರಿನಲ್ಲಿ ಅಚ್ಚುಕಟ್ಟಾಗಿ ರಂಗದ ಮೇಲೆ ತರಲು ಸಜ್ಜಾಗಿದೆ.

ವಿಚಿತ್ರ ಮತ್ತು ವಿಕ್ಷಿಪ್ತ ವ್ಯಕ್ತಿತ್ವಗಳನ್ನು ಅನಾವರಣಗೊಳಿಸುತ್ತ ಸಾಗುವ ‘ಮೈಂಡ್‌ ಯೂ’ ನಾಟಕ ಮಾನಸಿಕವಾಗಿ ಸ್ವಸ್ಥ ಸಮಾಜದ ಅಗತ್ಯವನ್ನು ಪ್ರತಿಪಾದಿಸುತ್ತದೆ. ಇಂಗ್ಲಿಷ್‌ ಮತ್ತು ಕನ್ನಡದಲ್ಲಿರುವ ಒಂದು ಗಂಟೆ ಅವಧಿಯ ನಾಟಕದಲ್ಲಿ ಅಲ್ಲಲ್ಲಿ ಬರುವ ನೃತ್ಯ, ಸಂಗೀತದಿಂದಾಗಿ ನಾಟಕ ನೃತ್ಯ ರೂಪಕದಂತೆ ಭಾಸವಾಗುತ್ತದೆ.

ಮದ್ಯ ವ್ಯವಸನಿಗಳು,ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾದ ಮನೋರೋಗಿಗಳ ತವಕ, ತಲ್ಲಣಗಳಿಗೆ ಸುಂದರ ಚೌಕಟ್ಟು ಒದಗಿಸುವ ಪ್ರಯತ್ನ ಮಾಡಲಾಗಿದೆ. ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಯೋಗಿತಾ ಕದಂ ರಚಿಸಿ, ನಿರ್ದೇಶಿಸಿದ‘ಮೈಂಡ್‌ ಯೂ’ ನಾಟಕದಲ್ಲಿಮನೋರೋಗಿಗಳ ಮತ್ತೊಂದು ವಿಕ್ಷಿಪ್ತ ಮುಖವನ್ನು ನೋಡುಗರ ಮನಸ್ಸುಗಳಿಗೆ ಆಪ್ತವಾಗುವಂತೆನವಿರಾಗಿ ಕಟ್ಟಿಕೊಟ್ಟಿದ್ದಾರೆ.

ADVERTISEMENT

ರಂಗಸಜ್ಜಿಕೆ, ವಸ್ತ್ರ ವಿನ್ಯಾಸ, ಧ್ವನಿ ಮತ್ತು ಬೆಳಕು ಹಾಗೂ ಸಂಗೀತ ಎಲ್ಲ ವಿಭಾಗಗಳಹೊಣೆಯನ್ನು ಮಂಥನ ತಂಡದ ವಿದ್ಯಾರ್ಥಿಗಳುನಿರ್ವಹಿಸುತ್ತಿರುವುದು ಈ ನಾಟಕದ ಮತ್ತೊಂದು ವಿಶೇಷ.

ಮಂಥನ ತಂಡ ಈಗಾಗಲೇ ಬೀದಿ ನಾಟಕಗಳ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡಿದೆ.ಸ್ತನ ಕ್ಯಾನ್ಸರ್‌,ತೊನ್ನು, ತಂಬಾಕು ವ್ಯಸನದ ದುಷ್ಪರಿಣಾಮ ಕುರಿತ ನಾಟಕಗಳು ಅಂತರ್‌ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಪ್ರಶಸ್ತಿ ರೂಪದಲ್ಲಿ ಬಂದ ಹಣವನ್ನು ಹಾಕಿ ಮೊದಲ ಬಾರಿಗೆ ರಂಗಪ್ರಯೋಗಕ್ಕೆ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಆದರೆ, ಮಾರ್ಕೆಂಟಿಂಗ್‌ ಗೊತ್ತಿಲ್ಲದೆ ಸೋತಿದ್ದಾರೆ. ಟಿಕೆಟ್‌ ಕೊಂಡು ತಮ್ಮ ಸಾಹಸವನ್ನು ಪ್ರೋತ್ಸಾಹಿಸುವ ರಂಗಾಸಕ್ತರಿಗಾಗಿ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.