ADVERTISEMENT

ಪರಿಸರ ಸಂರಕ್ಷಣೆಗೆ ಕಲಾ ಸೇವೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 19:45 IST
Last Updated 3 ಡಿಸೆಂಬರ್ 2018, 19:45 IST
ಚಿತ್ರ
ಚಿತ್ರ   

‘ಬೆಂಗಳೂರು ಸಾಕಷ್ಟು ಹಾಳಾಗಿದೆ. ಜೀವವೈವಿಧ್ಯವನ್ನು ಕಳೆದುಕೊಂಡು ಬರಡಾಗುತ್ತಿದೆ. ಇಂತಹ ನಗರಕ್ಕೆ ಚೈತನ್ಯ ತುಂಬಬೇಕಾದರೆ ಜನರಲ್ಲಿ ಜಾಗೃತಿ ಹೆಚ್ಚಬೇಕು’ ಎನ್ನುವುದು ಕಲಾವಿದೆ ಹುಮೇರಾ ಅಲಿ ಅವರ ಮಾತು.

ಚಿಕ್ಕ ವಯಸ್ಸಿನಿಂದಲೇ ಕಲಾವಿದೆ ಯಾಗುವ ಕನಸು ಕಂಡಿದ್ದ ಹುಮೇರಾ, ಓದು ಮುಗಿಸಿ ಬೇಗನೆ ಮದುವೆಯಾದರು. ಆದರೆ ಇವೆಲ್ಲದರ ನಡುವೆಯೂ ಅವರ ಹೃದಯ ಆಗಾಗ ನಗರದ ಸೌಂದರ್ಯ ಕೆಡುತ್ತಿರುವುದನ್ನು ಕಂಡು ಮರುಗುತ್ತಿತ್ತು. ಈ ಕಾಳಜಿಯೇ ಅವರನ್ನು ಇಂದು ಕಲಾವಿದೆಯಾಗಿ ರೂಪಿಸಿದೆ.

‘ಮಕ್ಕಳನ್ನು ದೊಡ್ಡವ ರನ್ನಾಗಿಸುವಲ್ಲಿಯೇ 13 ವರ್ಷ ಕಳೆದುಹೋಯಿತು. ಆದರೆ ಕಲಾವಿದೆಯಾಗಿ ಕುಂಚ ಹಿಡಿಯಬೇಕು ಎಂಬುದು ನನ್ನ ಬಹುಕಾಲದ ಕನಸಾಗಿತ್ತು. ಮಕ್ಕಳು ದೊಡ್ಡವರಾದಂತೆ ನನಗೂ ಸಮಯ ಸಿಕ್ಕಿತು. ಮೂರು ವರ್ಷಗಳಿಂದ ಮತ್ತೆ ಚಿತ್ರ ಬಿಡಿಸುತ್ತಿದ್ದೇನೆ’ ಎಂದು ಅವರು ಕಲಾವಿದೆಯಾಗಿ ರೂಪುಗೊಂಡ ಬಗೆಯನ್ನು ಹಂಚಿಕೊಂಡರು.

ADVERTISEMENT

ಕಲಾವಿದ ಜಾಕ್ಸನ್‌ ಪೊಲಾಕ್‌ ಪ್ರೇರಣೆ: ಹುಮೇರಾ ಅವರು ಅಮೆರಿಕದ ಪ್ರಖ್ಯಾತ ಕಲಾವಿದ ಜಾಕ್ಸನ್‌ ಪೊಲಾಕ್‌ ಅವರ ಚಿತ್ರಕಲೆಯನ್ನು ಮೆಚ್ಚಿ ಕೊಂಡರು. ಅವರಂತೆಯೇ ಚಿತ್ರಗಳನ್ನು ಬಿಡಿಸುವ ಕನಸು ಕಂಡರು. ಕಲುಷಿತಗೊಂಡಿರುವ ನದಿ, ಬೆಟ್ಟ, ನೀರು, ನಗರದ ಕಸ, ಜೀವವೈವಿಧ್ಯತೆ ಸೇರಿದಂತೆ ಪರಿಸರ ಕಾಳಜಿಯ ವಸ್ತುಗಳು ಇವರನ್ನು ಆಕರ್ಷಿಸಿದವು.

‘ನಗರೀಕರಣ ಹೆಚ್ಚಿದಂತೆ ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಲೇ ಬಂದಿದ್ದಾನೆ. ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ವ್ಯವಸ್ಥೆ ಹಿಂದೆ ಉಳಿದಿದೆ. ಚಿತ್ರಕಲೆಗಳು ಜನರನ್ನು ಜಾಗೃತರನ್ನಾಗಿ ಮಾಡುತ್ತವೆ’ ಎನ್ನುತ್ತಾರೆ ಹುಮೇರಾ.

ದುಬೈ, ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಅವರ ಏಕವ್ಯಕ್ತಿ ಪ್ರದರ್ಶನ ಡಿ.4ರಿಂದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.