ADVERTISEMENT

ಜ.29ರಿಂದ ತ್ಯಾಗರಾಜ ಆರಾಧನೆ ಸಂಗೀತೋತ್ಸವ: ಪ್ರಜಾವಾಣಿಯಲ್ಲಿ ಲೈವ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 17:02 IST
Last Updated 28 ಜನವರಿ 2021, 17:02 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕರ್ನಾಟಕ ಸಂಗೀತ ಪಿತಾಮಹ ಶ್ರೀ ತ್ಯಾಗರಾಜರ 174ನೇ ಆರಾಧನೆ ಪ್ರಯುಕ್ತ ಜ.29ರಿಂದ ಫೆ.2ರವರೆಗೆ ನಗರದ ಶೃಂಗೇರಿ ಶಂಕರ ಮಠದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಐದು ದಿನಗಳ ಕಾಲ ಪ್ರತಿ ದಿನ ಸಂಜೆ 5 ಗಂಟೆಯಿಂದ ಖ್ಯಾತ ವಿದ್ವಾಂಸರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು, Fb.com/Prajavani.net ನಲ್ಲಿ ಇದರ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.

ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ್, ಹಿರಿಯ ವೀಣಾ ವಾದಕ ಪ್ರೊ.ಆರ್.ವಿಶ್ವೇಶ್ವರನ್, ಸಂಸದ ತೇಜಸ್ವಿ ಸೂರ್ಯ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ಐದು ದಿನಗಳ ಕಾಲ ಆರ್.ಕೆ.ಪದ್ಮನಾಭ, ಆನೂರು ಅನಂತಕೃಷ್ಣ ಶರ್ಮ, ನಾಗವಲ್ಲಿ ನಾಗರಾಜ್, ಆರ್.ಎ.ರಮಾಮಣಿ, ವಿದ್ಯಾಭೂಷಣ, ಎಂ.ಎಸ್.ಶೀಲ, ಸುಮಾ ಸುಧೀಂದ್ರ ಹಾಗೂ ಇತರ ಪ್ರಖ್ಯಾತ ಕಲಾವಿದರಿಂದ ಗಾಯನ, ವಾದನ ಕಾರ್ಯಕ್ರಮಗಳು ರಂಜಿಸಲಿವೆ.

5 ದಿನದ ಕಾರ್ಯಕ್ರಮಗಳ ಸಂಪೂರ್ಣ ವಿವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.