ADVERTISEMENT

ಪ್ರೊ.ರಾಮಚಂದ್ರನ್, ಪ್ರೊ.ಪ್ರೇಮಶೇಖರ್‌ಗೆ ಶಿವರಾಮ ಕಾರಂತ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:02 IST
Last Updated 8 ಫೆಬ್ರುವರಿ 2021, 17:02 IST
ಪ್ರೊ. ಪ್ರೇಮಶೇಖರ್, ಪ್ರೊ.ಸಿ.ಎನ್.ರಾಮಚಂದ್ರನ್
ಪ್ರೊ. ಪ್ರೇಮಶೇಖರ್, ಪ್ರೊ.ಸಿ.ಎನ್.ರಾಮಚಂದ್ರನ್    

ಮೂಡುಬಿದಿರೆ: ‘ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ 2020ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿಯನ್ನು ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಮತ್ತು ಪ್ರೊ. ಪ್ರೇಮಶೇಖರ್ ಅವರಿಗೆ ನೀಡಲಾಗುವುದು‘ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ₹ 20 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಸಿ.ಎನ್.ರಾಮಚಂದ್ರನ್ ಹೆಸರಾಂತ ವಿಮರ್ಶಕರಾಗಿದ್ದು ಕನ್ನಡದಲ್ಲಿ 22, ಆಂಗ್ಲ ಭಾಷೆಯಲ್ಲಿ 15 ಗ್ರಂಥಗಳನ್ನು ರಚಿಸಿದ್ದಾರೆ. ಪ್ರೊ.ಪ್ರೇಮಶೇಖರ್‌ ಅವರು 14 ಕಥಾ ಸಂಕಲನ, 1 ಕವಿತಾ ಸಂಕಲನ, 15 ಲೇಖನ ಸಂಕಲನಗಳನ್ನು ಹಾಗೂ 2 ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯಶಾಸ್ತ್ರ ಚಿಂತಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT