ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದಲ್ಲಿ ನಿರ್ಮಿಸಿದ ಅಟ್ಟ

Last Updated 7 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಮನೆ ಕಟ್ಟುವಾಗ ವೆಚ್ಚ ಕಡಿಮೆ ಮಾಡುವುದು ಹೇಗೆ?~. ಇದು ಬಹಳಷ್ಟು ಮಂದಿಯ ತಲೆಬಿಸಿ.
ಮನೆಯೊಳಗೆ ಅಟ್ಟ (ಮಹಡಿ), ಮೆಟ್ಟಿಲು(ಸ್ಟೇರ್‌ಕೇಸ್) ಕಟ್ಟಿಸುವಾಗ ತಡೆಗೋಡೆಯ ನಿರ್ಮಾಣವೂ ಅತ್ಯಗತ್ಯ. ಇತ್ತೀಚಿನ ವರ್ಷಗಳಲ್ಲಿ ಸ್ಟೀಲ್ ರೇಲಿಂಗ್ಸ್ ಬಳಕೆ ಆಗುತ್ತಿದೆ. ಹಿಂದೆ ಮರದ ಬಳಕೆ ಇದ್ದಿತು.

`ಒಂದಡಿ ಉದ್ದ ಹಾಗೂ ಮೂರಡಿ ಎತ್ತರದ ಸ್ಟೀಲ್‌ನ ರೇಲಿಂಗ್‌ಗೆ 600 ರೂಪಾಯಿ ವೆಚ್ಚ ತಗುಲುತ್ತದೆ. ಇದನ್ನೇ ನೀಲಗಿರಿ ಮರದಿಂದ ನಿರ್ಮಿಸಿದರೆ 100 ರೂಪಾಯಿ ಮಾತ್ರ ಸಾಕಾಗುತ್ತದೆ. ಸಾಗವಾನಿ ಮರದ್ದಾದರೆ ಮೂರಡಿ ಎತ್ತರ ಹಾಗೂ ಒಂದಡಿ ಉದ್ದಕ್ಕೆ ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆ~ ಎನ್ನುತ್ತಾರೆ ಹುಬ್ಬಳ್ಳಿಯ ವಸಂತ್ ಹೆಗಡೆ.

ಇಲ್ಲೊಬ್ಬರ ಮನೆಯಲ್ಲಿ 30 ಅಡಿ ಉದ್ದದ ನೀಲಗಿರಿ ರೇಲಿಂಗ್ಸ್ ನಿರ್ಮಿಸಲು 2500 ರೂಪಾಯಿ ವೆಚ್ಚವಾಗಿದೆ. ಈ ಮರದ ಕಂಬಗಳನ್ನು ಒಂದಕ್ಕೊಂದು ಕಟ್ಟಿ ಬಂಧಿಸಲು ದಾರ ಇಲ್ಲವೆ ಬೆತ್ತದ ಎಳೆ ಬಳಸಿದರಾಯಿತು. ಇದಕ್ಕೆ ಒಂದು ಚದರಡಿಗೆ 15 ರೂಪಾಯಿ ವೆಚ್ಚವಾಗುತ್ತದೆ. ಮೆಟ್ಟಿಲುಗಳನ್ನು ನಿರ್ಮಿಸಲೂ ನೀಲಗಿರಿ ಮರವನ್ನೇ ಬಳಸಬಹುದು.

ಹೇಗೆ ಸಿದ್ಧಗೊಳಿಸಬೇಕು?

ಅಟ್ಟ ಕಟ್ಟುವಾಗ, ಕಾಂಕ್ರೀಟ್ ಹಾಕುವಾಗ ಬೋಲ್ಟ್ ಹಾಕಬೇಕು. ನಂತರ ನೀಲಗಿರಿ ಮರದ ಕಂಬದೊಳಗೆ ನಟ್ ಇಟ್ಟು ತಿರುಗಿಸಿದರೆ ಬಿಗಿಯಾಗಿ ಕೂರುತ್ತದೆ. ನಂತರ ಬೆತ್ತದ ಎಳೆಯಿಂದ ಕಟ್ಟಿದರಾಯಿತು. ಇನ್ನೂ ಕಡಿಮೆ ವೆಚ್ಚದ್ದೆಂದರೆ ಸಣಬು ಅಥವಾ ಪ್ಲಾಸ್ಟಿಕ್ ದಾರ ಬಳಸಬಹುದು. ಹೀಗೆ ಅಟ್ಟ ನಿರ್ಮಿಸುವಾಗ ಕಬ್ಬಿಣ, ಸ್ಟೀಲ್‌ಗೆ ಆಗುವ ವೆಚ್ಚದ ಶೇ 20ರಷ್ಟರಲ್ಲೇ ಮರದ ತಡೆಗೋಡೆ ಪೂರ್ಣಗೊಳ್ಳುತ್ತದೆ.

`ಅಟ್ಟಕ್ಕಷ್ಟೇ ಅಲ್ಲದೆ ಮನೆ ಒಳಗೆ-ಹೊರಗಿನ ಬಾಲ್ಕನಿಗೂ ಇವನ್ನೇ ಬಳಸಬಹುದು. ನೀರು ಸೋಕದ ಹಾಗೆ ಎಚ್ಚರ ವಹಿಸಬೇಕು. ನೀಲಗಿರಿ ಮರವನ್ನು ಆಗ್ಗಾಗ್ಗೆ ಪಾಲಿಶ್ ಮಾಡಿದರೆ 20 ವರ್ಷಕ್ಕೂ ಹೆಚ್ಚು ಬಾಳಿಕೆ ಬರುತ್ತದೆ. ಪೇಂಟ್ ಮಾಡಿದರೆ ಬಾಳಿಕೆ ಹೆಚ್ಚು. ಹುಳು ಹಿಡಿಯದಂತೆ ಕ್ರಿಮಿನಾಶಕ ಸಿಂಪಡಿಸಬೇಕು. ದಾರ ಅಥವಾ ಬೆತ್ತದೆಳೆಯಿಂದ ಕಟ್ಟಿದ ನಂತರ ಮೊದಲು ಕ್ರಿಮಿನಾಶಕ ಹೊಡೆಯಬೇಕು. ಸುಲಭ ಉಪಾಯವೆಂದರೆ ಬೇವಿನೆಣ್ಣೆಯಲ್ಲಿ ಅದ್ದಿದರೂ ಆದೀತು~ ಎನ್ನುವ ಸಲಹೆ ವಸಂತ್ ಅವರದು.

`12 ಅಡಿ ಉದ್ದದ ನೀಲಗಿರಿ ಕಂಬ ಅಥವಾ ಎಳೆಗೆ 80 ರೂಪಾಯಿ ಆಗುತ್ತದೆ. ಇಂಥವು ಮೂರಡಿ ಎತ್ತರ ಹಾಗೂ 12 ಅಡಿ ಉದ್ದದ ರೇಲಿಂಗ್‌ಗೆ ನಾಲ್ಕು ಬೇಕು. ಇದಕ್ಕೆ 320 ರೂಪಾಯಿ ಕಟ್ಟಿಗೆಗೆ ವೆಚ್ಚ ತಗುಲುತ್ತದೆ.

ಮನೆ ಕಟ್ಟುವಾಗ ಯೋಜನೆ ರೂಪಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಬಹುದು. ಪರಿಸರ ಸ್ನೇಹಿ, ಜತೆಗೆ ಅಗ್ಗದ ದರದ್ದು. ಗಳಿಸಿದ ಹಣವನ್ನೆಲ್ಲ ಮನೆ ಕಟ್ಟಲು ವೆಚ್ಚ ಮಾಡಿ ಕೈಖಾಲಿ ಮಾಡಿಕೊಳ್ಳ ದಿರಿ. ಮನೆ ಕಟ್ಟುವಾಗ ದುಡ್ಡು ಉಳಿಸುವ ಬಗ್ಗೆ ಯೋಚಿಸಿ-ಯೋಜಿಸಿ~ ಎನ್ನುತ್ತಾರೆ ವಸಂತ್ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT