ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ವಿನ್ಯಾಸಕ್ಕೊಂದು ಪ್ರಶಸ್ತಿ

Last Updated 18 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಮಂಗಳೂರಿನ ವೆಲೆನ್ಸಿಯಾ ರಸ್ತೆಯ ಎಡಗಡೆಗೆ ತಿರುಗಿ ಸ್ವಲ್ಪ ಮುಂದೆ ಪಯಣಿಸಿ ಎರಡನೇ ಅಡ್ಡ ರಸ್ತೆಯಲ್ಲಿನ ಎರಡನೇ ಮನೆಯ ಅಂಗಳಕ್ಕೆ ಕಾಲಿಟ್ಟರೆ ಅದ್ಭುತ ಒಳಾಂಗಣ ವಿನ್ಯಾಸದ ಮನೆ ಗೋಚರಿಸುತ್ತದೆ. ಅದೇ ಡಾ. ಪ್ರಕಾಶ್ ಸಲ್ದಾನ ಅವರ `ಕನಸಿನ ಮನೆ~.

ಮಂಗಳೂರು ನಗರ ಬೆಂಗಳೂರು, ಮೈಸೂರಿನಂತೆ ಬಹಳಷ್ಟು ಸಮತಟ್ಟಾದ ಪ್ರದೇಶವಲ್ಲ. ಕರಾವಳಿ ತೀರದ ಈ ವಾಣಿಜ್ಯ ನಗರಿಯ ಭೂಮಿ ಬಹಳ ಏರು-ತಗ್ಗುಗಳು ಇರುವಂತಹದ್ದು. ಮನೆ ಕಟ್ಟಲು ಸಮತಟ್ಟಾದ ಜಾಗ ಇಲ್ಲಿ ಸಿಗುವುದೇ ಬಹಳ ಅಪರೂಪ.

ಉದಾಹರಣೆಗೆ 40-60 ಉದ್ದಗಲದ ನಿವೇಶನ ರಸ್ತೆಯ ಭಾಗದಲ್ಲಿ ತಗ್ಗಾಗಿದ್ದರೆ, ಹಿಂದಿನ ಪ್ರದೇಶ ದೊಡ್ಡ ಏರಿಯಂತೆ ಇರುತ್ತದೆ. ಹಾಗಾಗಿ ಇಲ್ಲಿ ಜಾಗ ಹೇಗಿದೆಯೋ ಅದಕ್ಕೆ ತಕ್ಕಂತೆಯೇ ಮನೆಯನ್ನು ಕಟ್ಟಿಕೊಳ್ಳಬೇಕು.

ಸಲ್ಡಾನ ಅವರ ನಿವೇಶನವೂ ಎದುರುಗಡೆ ಎತ್ತರವಿದ್ದು ಕೆಳ ಭಾಗದಲ್ಲಿ ತಗ್ಗಾಗಿದೆ. ಅದಕ್ಕೆ ತಕ್ಕಂತೆಯೇ ಮನೆಯನ್ನೂ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಅಂದರೆ, ತಗ್ಗು ಇರುವೆಡೆಗೆ ಮಣ್ಣು ಭರ್ತಿ ಮಾಡಿ ಭೂಮಿಯನ್ನು ಸಮತಟ್ಟು ಮಾಡುವ ಗೋಜಿಗೇ ಹೋಗಿಲ್ಲ. ಭೂಮಿಯ ಆಕಾರ ಹೇಗೆದೆಯೋ ಅದನ್ನೇ ಒಂದು ರೀತಿಯಲ್ಲಿ ಅನುಕೂಲಕಾರಿಯಾಗಿಸಿಕೊಂಡು ಮನೆ ಕಟ್ಟಲಾಗಿದೆ.

ತಗ್ಗು ಪ್ರದೇಶವಾಗಿರುವ ಎದುರು ಭಾಗದಿಂದ ಮೇಲಕ್ಕೆ ಬರಲು ಎರಡು ಕಡೆಯಿಂದ ಮೆಟ್ಟಿಲುಗಳಿವೆ. ಗೇಟಿನ ವಿನ್ಯಾಸವೂ ಅದಕ್ಕೆ ತಕ್ಕಂತೆಯೇ ಅನನ್ಯ. ಅದನ್ನ್ಲುಸೈಡ್ಲ್ ಮಾಡಬಹುದು, ಸರಿಸಬಹುದು.

ಪ್ರವೇಶ ದ್ವಾರದ ಎದುರುಗಡೆಗೇ(ಪೋರ್ಟಿಕೋ) ಕಲ್ಲಿನಿಂದ ಕಟ್ಟಿದ ಮೂರು ಗೋಡೆಗಳಿವೆ. ಅವಕ್ಕೆ ಮೂರು ಉಕ್ಕಿನ ಸರಳುಗಳನ್ನೂ ಅಳವಡಿಸಲಾಗಿದೆ. ಅದರ ಮುಚ್ಚುಗೆಯಾಗಿ ಸಿಮೆಂಟ್ ತೊಲೆಗಳನ್ನು (ಪರ್ಗುಲಾಸ್) ರೂಪಿಸಿ ಬೆಳಕು ನುಗ್ಗಿ ಬರಲು ಅವಕಾಶ ನೀಡಿ ಗಾಜು ಹೊದಿಸಲಾಗಿದೆ.

ಹೊರಗೋಡೆ ಸಂಪೂರ್ಣವಾಗಿ ಹೆಬ್ಬಂಡೆಯ ಕಲ್ಲಿನಿಂದಲೇ ನಿರ್ಮಿತವಾಗಿದೆ. ಮನೆಯ ಪ್ರವೇಶಕ್ಕೂ ಮುಂಚಿನ ಭಾಗದಲ್ಲಿ ಎದುರುಗಡೆಗೆ ಮರದ ಬೆಂಚು ಹಾಕಲಾಗಿದೆ. ಅದರ ಮೇಲ್ಪದರ (ಹಲಗೆ) ಎತ್ತಿದರೆ ಅದರಲ್ಲಿ ಪಾದರಕ್ಷೆ ಇಡಲು ಸಾಕಷ್ಟು ಜಾಗವಿದೆ. ಈ ಬೆಂಚನ್ನು ಮನೆಯ ಹೊರಗೆ ಕುಳಿತು ವಿಶ್ರಮಿಸಿಕೊಳ್ಳಲೂ ಉಪಯೋಗಿಸಬಹುದು.

ಮನೆ ಒಳಗೆ ಪ್ರವೇಶಿಸಿದ ಕೂಡಲೇ ಹೊರಗಿನಷ್ಟೇ ಬೆಳಕು ಒಳಗೂ ಹರಡಿಕೊಂಡಿರುವುದನ್ನು ಕಾಣಬಹುದು. ಮನೆ ಪ್ರವೇಶ ದ್ವಾರ(ಮುಂಬಾಗಿಲು) ಮಾತ್ರ ಮರದಿಂದ ಮಾಡಿದ್ದಾಗಿದೆ. ಒಳಾಂಗಣದಲ್ಲಿ ಬಲಗಡೆಗೆ ಬೃಹತ್ತಾದ ಕಿಟಕಿ ಇದೆ. ಅದರದ್ದ್ಲೂಸೈಡ್ಲಿಂಗ್ ಗಾಸ್ಲ್ ವಿನ್ಯಾಸ. ಅದರೊಟ್ಟಿಗೇ ಮುಂಭಾಗದಲ್ಲಿ ಮರದ ಹಲಗೆಯ್ಲಸೈಡ್ಲಿಂಗ್ ಬಾಗಿಲೂ ಇದೆ.

ಬೆಳಕು ಬೇಕೆನಿಸಿದರೆ ಮರದ ಕಿಟಕಿ ಸರಿಸಿದರಾಯಿತು. ಮಳೆಗಾಲವಾದರೆ ನೀರು ಒಳಕ್ಕೆ ಎರಚದಂತೆ ಗಾಜಿನ ಬಾಗಿಲು ಅಡ್ಡ ಉಳಿಸಿದರಾಯಿತು. ಒಟ್ಟಾರೆ ಈ ಮನೆಯೊಳಗಿರುವುದೆಂದರರೆ ಹವಾನಿಯಂತ್ರಿತ ಆವರಣದಲ್ಲಿದ್ದ ಅನುಭವವಾಗುತ್ತದೆ.
ಹಾಲ್ ಸಹ ಬಹಳ ಭಿನ್ನವಾಗಿ ವಿನ್ಯಾಸಗೋಳಿಸಲಾಗಿದೆ. ಇದರ ಬಹುತೇಕ ಭಾಗ ಪಾರದರ್ಶಕವಾಗಿದೆ. ಒಳಗಿದ್ದೂ ಹೊರಗೇ ಇದ್ದ ಅನುಭವವಾಗುತ್ತದೆ.

ಬಲ ಬದಿಗೆ ಹಿರಿಯರ ಕೋಣೆಯಿದೆ. ಹಾಲ್‌ನಿಂದ ಮುಂದೆ ಸಾಗಿದರೆ `ಓಪನ್ ಕಿಚನ್~. ಎರಡೂ ಬದಿಯಲ್ಲಿ ಕಟ್ಟಿದ ಕಲ್ಲಿನ ಗೋಡೆ ಶಿಲ್ಪದ ಗೋಡೆಯಂತೆ ಕಾಣಿಸುತ್ತದೆ. ಇಬ್ಬರು ಕಿಚನ್‌ನಲ್ಲೇ ಕುಳಿತು ಊಟ ಮಾಡಬಹುದು, ಅಷ್ಟು ವಿಶಾಲ ಸ್ಥಳಾವಕಾಶ ಇಲ್ಲಿದೆ.

ಅಡಿಗೆ ಮನೆಯ ವಿಭಜಿಸುವಲ್ಲಿ ಉಕ್ಕಿನ ಸರಳುಗಳನ್ನು ಹಾಕಿದ್ದು ಗಾಜಿನಿಂದ ಇದು ಆವೃತವಾಗಿದೆ. ಬಾಗಿಲು ಸಹ ಸ್ಲೈಡಿಂಗ್ ಇದೆ. ಅಲ್ಲಿ ಕೂಡ ಸಾಕಷ್ಟು ಗಾಳಿ-ಬೆಳಕು ಬರುತ್ತದೆ. ಮುಂದೆ ಇರುವ ಸ್ನಾನದ ಗೃಹವಂತೂ ವೈಶಿಷ್ಟ್ಯಮಯ. ಅದಕ್ಕೂ ಸಾಂಪ್ರದಾಯಿಕ ಮತ್ತು ಅಧುನಿಕತೆಯ ಮಿಶ್ರಣ.

ನಲ್ಲಿಯ ಕೆಳಗೆ ಹಿತ್ತಾಳೆ ಹಂಡೆ ಇರಿಸಿವ ಶೈಲಿ ಇಲ್ಲಿನ ಭಿನ್ನತೆಯನ್ನು ಎತ್ತಿ ತೋರುತ್ತದೆ(ಚಿತ್ರ ನೋಡಿ). ಸೋಲಾರ್ ವ್ಯವಸ್ಥೆ ಇದ್ದು, ವರ್ಷದ ಬಹಳಷ್ಟು ಸಮಯ ಬಿಸಿನೀರಿಗೇನೂ ಬರವಿಲ್ಲ. ಮಳೆಗಾಲದಲ್ಲಿ ಮಾತ್ರ ಗೀಸರ್‌ನಿಂದ ಬರುವ ನೀರನ್ನು ನಲ್ಲಿಯ ಕೆಳಗಿನ ಹಂಡೆಯಲ್ಲಿ ತುಂಬಿಸಿಟ್ಟುಕೊಳ್ಳಬಹುದು.

ಇದರ ಮಗ್ಗಲಲ್ಲಏ ಹಿಂಬದಿಯ ಕೈತೋಟಕ್ಕೆ ಹೋಗಲು ಬಾಗಿಲಿದೆ. ಡೈನಿಂಗ್ ಹಾಲಿನಿಂದ ಮಹಡಿಗೆ ಹೋಗಲು ರೂಪಿಸಿದ ಮೆಟ್ಟಿಲುಗಳಂತೂ ಕಲಾತ್ಮಕವಾಗಿವೆ. ಮೇಲಿನ ಮಹಡಿಯಲ್ಲಿ ಮಾಸ್ಟರ್ ಬೆಡ್‌ರೂಮ್, ಮಕ್ಕಳ ರೂಮ್ ಇದ್ದು, ಒಳಾಂಗಣ ವಿನ್ಯಾಸ ಮನಸೆಳೆಯುತ್ತದೆ. ಮುಂದೆ ಸಿಟ್‌ಔಟ್ ಇದ್ದು ಅಲ್ಲಿ ನಿಂತರೆ ಮಂಗಳೂರು ನಗರದ ಕೆಲವು ಭಾಗ ಕಣ್ಣೋಟಕ್ಕೆ ಗೋಚರಿಸುತ್ತದೆ.

ಈ ಮನೆಗೆ 2011ರಲ್ಲಿ `ವಾಸದ ಮನೆ ವಿಭಾಗದ ಅಲ್ಟ್ರಾಟೆಕ್ ಸಿಮೆಂಟ್ ಪ್ರಶಸ್ತಿ~ಯೂ ಸಿಕ್ಕಿದೆ. ಮನೆಯ ಒಳಾಂಗಣ ವಿನ್ಯಾಸ ಎಷ್ಟು ಮನಮೋಹಕವಾಗಿದೆ ಎನ್ನುವುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ(ವಿನ್ಯಾಸಕಾರರು ಮೋನಿಕಾ ಕಾಮತ್). ಮನೆ ಬಗ್ಗೆ ಹೆಚ್ಚಿನ ಮಾಹಿತಿಗೆ ಡಾ. ಪ್ರಕಾಶ್ ಅವರ ಸಂಚಾರಿ ದೂರವಾಣಿ ಸಂಖ್ಯೆ: 9845081567

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT