ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಟಮಿನ್ ಡಿ’ ಮೊಟ್ಟೆ

ಚೆಲ್ಲಾಪಿಲ್ಲಿ
Last Updated 25 ಜೂನ್ 2015, 19:30 IST
ಅಕ್ಷರ ಗಾತ್ರ

ಸುಗುಣಾ ಫುಡ್ಸ್, ಭಾರತದಲ್ಲಿ ಇದೇ ಮೊದಲ ಬಾರಿಗೆ ವಿಟಮಿನ್ ಡಿ ಗುಣಗಳಿಂದ ಶ್ರೀಮಂತವಾಗಿರುವ ವಿಶೇಷ ಮೊಟ್ಟೆಗಳ ಒಂದು ಸಂಪೂರ್ಣ ಹೊಸ ಶ್ರೇಣಿಯನ್ನು ಪರಿಚಯಿಸಿರುವುದಾಗಿ ಹೇಳಿಕೊಂಡಿದೆ.

ಈ ಮೊಟ್ಟೆಗಳು ಒಬ್ಬ ವ್ಯಕ್ತಿ ದಿನವೊಂದಕ್ಕೆ ಸೇವಿಸಬೇಕಿರುವ, ಅಗತ್ಯವಾದ ಶೇ 82ರಷ್ಟು ವಿಟಮಿನ್ ಡಿ ಅಂಶಗಳನ್ನು ಒದಗಿಸುತ್ತವೆಯಂತೆ. ಬೆಲೆ: 6 ಮೊಟ್ಟೆಗಳ ಒಂದು ಪ್ಯಾಕಿಗೆ ₹ 48.

ಆ್ಯಂಟಿ ಏಜಿಂಗ್ ಕ್ರೀಮ್


ಲೋಟಸ್ ಹರ್ಬಲ್ಸ್ ಈಗ ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ತಡೆಯುವ ಯುತ್‌ಆರ್‌ಎಕ್ಸ್ ಆ್ಯಂಟಿ ಏಜಿಂಗ್ ಟ್ರಾನ್ಸ್‌ಫಾರ್ಮಿಂಗ್ ಕ್ರೀಮ್ ಅನ್ನು ಹೊರತಂದಿದೆ.

ಈ ಕ್ರೀಮ್ ಜಿನೆಪ್ಲೆಕ್ಸ್ ಯೂತ್ ಕಾಂಪೌಂಡ್ ಹೊಂದಿದ್ದು, ಕಳೆಗುಂದಿದ ತ್ವಚೆಗೆ ಹೊಳಪು ನೀಡುವ, ದೃಢಗೊಳಿಸುವ ಹಾಗೂ ಸಂರಕ್ಷಿಸುವ ಗುಣಗಳನ್ನು ಒಳಗೊಂಡಿದೆ.

ಇದರಲ್ಲಿನ ಜಿನೆಪ್ಲೆಕ್ಸ್ ಯುತ್ ಕಾಂಪೌಂಡ್ ವಯಸ್ಸಾದಂತೆ ಕಾಣುವುದನ್ನು ತಡೆಯುವ ಸಕ್ರಿಯ ನೈಸರ್ಗಿಕ ವಸ್ತುವಾಗಿದ್ದು, ಪಾನಕ್ಸ್ ಜಿನ್‌ಸೆಂಗ್, ಶುಂಠಿ, ಹಾಲಿನ ಪೆಪ್ಟೈಡ್‌ಗಳನ್ನು ಒಳಗೊಂಡಿದೆ. ಜಿನ್ ಸೆಂಗ್ ಜೀವಕೋಶಗಳ ಚಯಾಪಚಯ ಕಾರ್ಯ ಹೆಚ್ಚಿಸಿ, ಹೆಚ್ಚಿನ ಕೊಲಾಜೆನ್ ಉತ್ಪಾದನೆಗೆ ಕಾರಣವಾಗಿ ಸುಕ್ಕು, ಸೂಕ್ಷ್ಮ ಗೆರೆಗಳನ್ನು ದೂರವಾಗಿಸುತ್ತದೆ.

ಯುತ್‌ಆರ್‌ಎಕ್ಸ್ ಆ್ಯಂಟಿ ಏಜಿಂಗ್ ಟ್ರಾನ್ಸ್‌ಫಾರ್ಮಿಂಗ್ ಕ್ರೀಮ್‌ನ ಬೆಲೆ ₹ 545.

ಸ್ಮಾರ್ಟ್‌ಫೋನ್  ಎಕ್ಸ್‌ಪೀರಿಯ


ಸೋನಿ ಇಂಡಿಯಾ, ಸೆಲ್ಫಿ ಪ್ರಿಯರಿಗಾಗಿ ವಿನೂತನ ಹಾಗೂ ವಿಶೇಷ ಎಕ್ಸ್‌ಪೀರಿಯ ಸಿ4- ಸೋನಿಯ ಮುಂದಿನ ತಲೆಮಾರಿನ ಸ್ವಯಂ ಸೆಲ್ಫಿ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ.

ಈ ಹೊಸ ಫೋನ್‌ನಲ್ಲಿ, ಸಂಪೂರ್ಣ ಎಚ್‌ಡಿ ಡಿಸ್‌ಪ್ಲೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ 5 ಎಂಪಿ ಮುಂಬದಿ ಕ್ಯಾಮೆರಾ ಇದೆ. ಸೂಪರ್-ಫಾಸ್ಟ್ ಆಕ್ಟಾ-ಕೋರ್ ಪ್ರಾಸೆಸರ್ ಹೊಂದಿದೆ. ಬೆಲೆ: ₹ 29, 490. ಹೆಚ್ಚಿನ ಮಾಹಿತಿಗೆ http://www.sony.co.in

ತರಕಾರಿಗಳ ಪಾನೀಯ


ಜಾಗತಿಕ ನೈಸರ್ಗಿಕ ಆಹಾರಗಳ ತಯಾರಕರಾದ ನೇಚರ್‍ಸ್ ಫರ್ಸ್ಟ್ ಈಗ ತನ್ನ ಶೇ 100ರಷ್ಟು ನೈಸರ್ಗಿಕ ಜೂಸ್ ವೆಜೀಸ್ ಟು ಗೋ ಅನ್ನು ಬಿಡುಗಡೆ ಮಾಡಿದೆ.

ವೆಜೀಸ್ ಟು ಗೋ ಶೇ 100 ಸಂಪೂರ್ಣ ನೈಸರ್ಗಿಕ ಪೇಯವಾಗಿದ್ದು, ಹಲವು ಆರೋಗ್ಯಕರ ತರಕಾರಿಗಳನ್ನು ಮಿಶ್ರಣ ಮಾಡಿ ರುಚಿಕರ, ಪೋಷಕಾಂಶಯುತ, ವಿಟಮಿನ್‌ಗಳ ಸಮ್ಮಿಶ್ರಣದಲ್ಲಿ ಇದನ್ನು ತಯಾರಿಸಲಾಗಿದೆ. ಬೆಲೆ: 300 ಎಂಎಲ್‌ಗೆ ₹ 80  ಹಾಗೂ ಒಂದು ಲೀಟರ್‌ಗೆ ₹ 175.

ಹೆಚ್ಚಿನ ವಿವರಗಳಿಗೆ ಲಾಗಿನ್ ಆಗಿ– www.naturesfirst.com

ಎಲ್‌ಟಿಇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್


ಚೀನಾದ ಪ್ರಮುಖ ದೂರಸಂಪರ್ಕ ಸಾಧನಗಳು ಹಾಗೂ ಸೇವೆಗಳನ್ನು ಒದಗಿಸುವ  ಕಂಪನಿ ಫಿಕಾಂ, ತನ್ನ ಗ್ರಾಹಕರಿಗಾಗಿ ಎಲ್‌ಟಿಇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಫಿಕಾಂ ಪ್ಯಾಷನ್ 660 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

1920x 1080  ಪಿಕ್ಸಲ್ಸ್ ರೆಸಲ್ಯೂಷನ್ (ಎಫ್‌ಎಚ್‌ಡಿ) ಕ್ಯಾಮೆರಾ ಇದ್ದು, 5.0 ಇಂಚುಗಳ ಅಗಲದ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೆ ಇದೆ. 4ಜಿ ಎಲ್‌ಟಿಇ ಜೊತೆಗೆ ಕ್ವಾಲ್‌ಕಾಂನ ಸ್ನ್ಯಾಪ್‌ಡ್ರಾಗನ್ 615 ಪ್ರಾಸೆಸರ್‌ಗಳಿಂದ ಕೂಡಿದೆ.

ಎಲ್‌ಇಡಿ ಫ್ಲ್ಯಾಷ್‌ ಇರುವ 13 ಮೆಗಾಪಿಕ್ಸೆಲ್‌ಗಳ ಹಿಂಬದಿ ಕ್ಯಾಮೆರಾ, ಮುಂಬದಿಯಲ್ಲಿ 5 ಮೆಗಾಪಿಕ್ಸೆಲ್‌ಗಳ ಕ್ಯಾಮೆರಾ ಇರುವುದು ವಿಶೇಷ. ಗ್ಲೋಬಲ್ 4ಜಿ ರೋಮಿಂಗ್ ಬೆಂಬಲ ಹಾಗೂ ವಿಶೇಷ ಪೆಡೊಮೀಟರ್‌ಗಳಿಂದ ಕೂಡಿರುವ ಇದು ಅಮೆಝಾನ್.ಇನ್ (Amazon.in)ನಲ್ಲಿ ಲಭ್ಯ. ಬೆಲೆ: ₹ 10,990.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT