ADVERTISEMENT

ಜುಲೈಗೆ ಹೊಸ ಹೋಂಡಾ ಸಿಟಿ: ಗರಿಷ್ಠ ಸುರಕ್ಷತೆ ಭರವಸೆ

ಪಿಟಿಐ
Published 17 ಜೂನ್ 2020, 13:52 IST
Last Updated 17 ಜೂನ್ 2020, 13:52 IST
ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿ
ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿ    

ನವದೆಹಲಿ: ಐದನೇ ಪೀಳಿಗೆಯಹೊಸ ಹೋಂಡಾ ಸಿಟಿ ಕಾರ್‌ ಜುಲೈನಲ್ಲಿ ಬಿಡುಗಡೆ ಆಗಲಿದ್ದು, ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂದು ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿ ತಿಳಿಸಿದೆ.

ಅಲೆಕ್ಸಾದೊಂದಿಗೆ ಸಂಪರ್ಕಿತ ದೇಶದ ಮೊದಲ ಕಾರ್‌ ಇದಾಗಿದ್ದು, ಬಿಎಸ್‌ 6ನ ಪೆಟ್ರೋಲ್‌ ಮತ್ತು ಡೀಸೆಲ್‌ ಮಾದರಿಗಳಲ್ಲಿ ಲಭ್ಯವಿರಲಿದೆ.

1.5 ಲೀಟರ್‌ ಪೆಟ್ರೋಲ್‌ ಎಂಜಿನ್‌, 6 ಸ್ಪೀಡ್ ಮ್ಯಾನುಯಲ್‌ ಮತ್ತು 7 ಸ್ಪೀಡ್‌ ಸಿವಿಟಿ ಆಯ್ಕೆಗಳಲ್ಲಿ ಇರಲಿದೆ. 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ 6 ಸ್ಪೀಡ್ ಮ್ಯನುಯಲ್‌ ಟ್ರಾನ್ಸ್‌ಮಿಷನ್‌ ಹೊಂದಿದೆ.2.3 ಸಿ.ಎಂ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಇರುವ ಆಡಿಯೊ ಸಿಸ್ಟಂ, ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕ ಹೊಂದಿರಲಿದೆ. 6 ಏರ್‌ಬ್ಯಾಗ್‌, ಮಲ್ಟಿ ಆ್ಯಂಗಲ್‌ ರೇರ್‌ ಕ್ಯಾಮೆರಾ, ಟೈರ್‌ ಪ್ರೆಷರ್‌ ಮಾನಿಟರಿಂಗ್‌ ಸಿಸ್ಟಂ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.