ADVERTISEMENT

ಔಡಿ ಇ–ಟ್ರಾನ್‌ ಜಿಟಿ, ಆರ್‌ಎಸ್‌ ಇ–ಟ್ರಾನ್‌ ಜಿಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 14:04 IST
Last Updated 22 ಸೆಪ್ಟೆಂಬರ್ 2021, 14:04 IST
ಆರ್‌ಎಸ್‌ ಇ–ಟ್ರಾನ್‌ ಜಿಟಿ
ಆರ್‌ಎಸ್‌ ಇ–ಟ್ರಾನ್‌ ಜಿಟಿ   

ಬೆಂಗಳೂರು: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಔಡಿ ಕಂಪನಿಯು ನಾಲ್ಕು ಬಾಗಿಲುಗಳ, ಸಂಪೂರ್ಣ ವಿದ್ಯುತ್ ಚಾಲಿತ ಸೂಪರ್‌ಕಾರ್‌ ಇ–ಟ್ರಾನ್‌ ಜಿಟಿ ಮತ್ತು ಆರ್‌ ಇ–ಟ್ರಾನ್‌ ಜಿಟಿ ಬಿಡುಗಡೆ ಮಾಡಿದೆ. ಇವುಗಳ ಎಕ್ಸ್‌ ಷೋರೂಂ ಬೆಲೆ ಕ್ರಮವಾಗಿ ₹ 1.79 ಕೋಟಿ ಮತ್ತು ₹ 2.04 ಕೋಟಿ ಇದೆ.

ಇ–ಟ್ರಾನ್‌ ಜಿಟಿ ಕಾರನ್ನುಒಂದು ಬಾರಿ ಚಾರ್ಜ್‌ ಮಾಡಿದರೆ 401–481 ಕಿ.ಮೀ ದೂರ ಕ್ರಮಿಸಬಹುದು, ಆರ್‌ಎಸ್‌ ಇ–ಟ್ರಾನ್‌ ಜಿಟಿ 388–500 ಕಿ.ಮೀ ಸಾಗಬಲ್ಲದು. ಇವುಗಳ ಬ್ಯಾಟರಿ ಶೇಕಡ 5ರಷ್ಟು ಇದ್ದಾಗ ಚಾರ್ಜ್‌ಗೆ ಹಾಕಿದರೆ 22 ನಿಮಿಷಗಳಲ್ಲಿ ಶೇ 80ರಷ್ಟು ಚಾರ್ಜ್‌ ಆಗುತ್ತದೆ ಎಂದು ಕಂಪನಿ ತಿಳಿಸಿದೆ.

‘ಭಾರತದಲ್ಲಿ ಮೊದಲ ವಿದ್ಯುತ್ ಚಾಲಿತ ಸೂಪರ್‌ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ನಮಗೆ ಈ ದಿನವು ಒಂದು ಮೈಲಿಗಲ್ಲು’ ಎಂದು ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೋನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.