ADVERTISEMENT

ಹೊಸ ಪಲ್ಸರ್‌ 180: ಬೆಲೆ ₹ 1.08 ಲಕ್ಷ

ಪಿಟಿಐ
Published 23 ಫೆಬ್ರುವರಿ 2021, 14:16 IST
Last Updated 23 ಫೆಬ್ರುವರಿ 2021, 14:16 IST

ನವದೆಹಲಿ: ಬಜಾಜ್ ಆಟೊ ಕಂಪನಿಯು ಹೊಸ ಆವೃತ್ತಿಯ ಪಲ್ಸರ್‌ 180 ಬೈಕ್‌ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 1.08 ಲಕ್ಷ ಇದೆ.

178.6 ಸಿಸಿ ಮಾದರಿಯು ಸ್ಪೋರ್ಟಿ ಸ್ಪ್ಲಿಟ್‌ ಸೀಟ್‌, ಕಪ್ಪು ಬಣ್ಣದ ಅಲಾಯ್‌ ವೀಲ್ಸ್‌, ಎಲ್‌ಇಡಿ ಟೇಲ್‌ ಲ್ಯಾಂಪ್‌, 5 ಸ್ಪೀಡ್‌ ಟ್ರಾನ್ಸ್‌ಮಿಷನ್‌ ಗಿಯರ್ ಬಾಕ್ಸ್‌ ಒಳಗೊಂಡಿದೆ.

ಸದ್ಯ, ಸ್ಪೋರ್ಟ್ಸ್‌ ದ್ವಿಚಕ್ರ ವಾಹನ ವಿಭಾಗದಲ್ಲಿ 180–200 ಸಿಸಿ ಸಾಮರ್ಥ್ಯದಶೇ 20ರಷ್ಟು ಮೋಟರ್‌ಸೈಕಲ್‌ಗಳಿವೆ. ಆಧುನಿಕ ತಂತ್ರಜ್ಞಾನ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಬಯಸುವ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಪಲ್ಸರ್‌ 180 ಬೈಕ್‌ ರೂಪಿಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.