ADVERTISEMENT

ಬಿಎಂಡಬ್ಲ್ಯು ಎಂ340ಐ ಎಕ್ಸ್‌ ಡ್ರೈವ್‌ ಮಾರುಕಟ್ಟೆಗೆ

ಪಿಟಿಐ
Published 10 ಮಾರ್ಚ್ 2021, 17:04 IST
Last Updated 10 ಮಾರ್ಚ್ 2021, 17:04 IST
ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್
ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್   

ನವದೆಹಲಿ: ಐಷಾರಾಮಿ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು, ಭಾರತದ ಮಾರುಕಟ್ಟೆಗೆ ‘ಎಂ340ಐ ಎಕ್ಸ್‌ಡ್ರೈವ್‌’ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 62.9 ಲಕ್ಷ.

ಚೆನ್ನೈ ಘಟಕದಲ್ಲಿ ಇದು ತಯಾರಾಗಿದ್ದು, ಎಂ ಎಂಜಿನ್‌ನೊಂದಿಗೆ ಗರಿಷ್ಠ ಸಾಮರ್ಥ್ಯದ ಮೊದಲ ಮಾದರಿ ಇದಾಗಿದೆ ಎಂದು ಕಂಪನಿ ಹೇಳಿದೆ.

ಈ ಕಾರು 2,998 ಸಿಸಿ 6 ಸಿಲಿಂಡರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು 387 ಎಚ್‌ಪಿ ಶಕ್ತಿ ಉತ್ಪಾದಿಸಬಲ್ಲದು. ಇದರ ಎಂಜಿನ್‌ 8 ಸ್ಪೀಡ್‌ ಅಟೊಮೆಟಿಕ್‌ ಟ್ರಾನ್ಸ್‌ಮಿಷನ್‌ ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.