ADVERTISEMENT

ಹೊಸ ಬಿಎಂಡಬ್ಲ್ಯು 6 ಸಿರೀಸ್‌ ಬಿಡುಗಡೆ

ಪಿಟಿಐ
Published 8 ಏಪ್ರಿಲ್ 2021, 13:57 IST
Last Updated 8 ಏಪ್ರಿಲ್ 2021, 13:57 IST
ಬಿಎಂಡ‌ಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಂ ಪವ್ಹಾ ಅವರು ಹೊಸ ಬಿಎಂಡಬ್ಲ್ಯು 6 ಸಿರೀಸ್‌ ಬಿಡುಗಡೆ ಮಾಡಿದರು
ಬಿಎಂಡ‌ಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಂ ಪವ್ಹಾ ಅವರು ಹೊಸ ಬಿಎಂಡಬ್ಲ್ಯು 6 ಸಿರೀಸ್‌ ಬಿಡುಗಡೆ ಮಾಡಿದರು   

ನವದೆಹಲಿ: ಐಷಾರಾಮಿ ಕಾರುಗಳನ್ನು ತಯಾರಿಸುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ 6ನೇ ಸಿರೀಸ್‌ ಸೆಡಾನ್‌ನ ಸುಧಾರಿತ ಆವೃತ್ತಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ₹ 67.9 ಲಕ್ಷ ಇದೆ (ಎಕ್ಸ್ ಷೋರೂಂ).

ಪೆಟ್ರೋಲ್‌ ಎಂಜಿನ್‌ನ 630ಐ ಎಂ ಸ್ಪೋರ್ಟ್‌ ಬೆಲೆ ₹ 67.9 ಲಕ್ಷ ಇದೆ. ಡೀಸೆಲ್ ಟ್ರಿಮ್‌ 630ಡಿ ಎಂ ಸ್ಪೋರ್ಟ್‌ ಬೆಲೆ ₹ 68.9 ಲಕ್ಷದಿಂದ ಆರಂಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಅತ್ಯುತ್ತಮವಾದ ಐಷಾರಾಮಿ ಮತ್ತು ಆರಾಮದಾಯಕ ಸೌಕರ್ಯಗಳನ್ನು ನಿರೀಕ್ಷಿಸುವವರ ಆಯ್ಕೆಯ ವಾಹನ ಇದಾಗಿದೆ ಎಂದು ಬಿಎಂಡ‌ಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಂ ಪವ್ಹಾ ತಿಳಿಸಿದ್ದಾರೆ.

ADVERTISEMENT

6 ಸಿರೀಸ್‌ನ ಸೆಡಾನ್‌ ಎಂಟು ಗಿಯರ್‌ಗಳ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಹಾಗೂ ಏರ್ ಸಸ್ಪೆನ್ಶನ್‌ ಸೇರಿದಂತೆ ಹಲವು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.