ನವದೆಹಲಿ: ಬಿಎಂಡಬ್ಲ್ಯು ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ಬಿಎಂಡಬ್ಲ್ಯು ಎಸ್1000ಆರ್ ಮೋಟರ್ಸೈಕಲ್ ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆ ₹ 17.9 ಲಕ್ಷದಿಂದ ₹ 22.5 ಲಕ್ಷದವರೆಗಿದೆ.
ಸ್ಯಾಂಡರ್ಡ್ ಆವೃತ್ತಿಯ ಬೆಲೆ ₹ 17.9 ಲಕ್ಷ, ಪ್ರೊ ಬೆಲೆ ₹ 19.75 ಲಕ್ಷ ಹಾಗೂ ಪ್ರೊ ಎಂ ಸ್ಪೋರ್ಟ್ ಆವೃತ್ತಿಯ ಬೆಲೆ ₹ 22.5 ಲಕ್ಷ ಇದೆ. 4 ಸಿಲಿಂಡರ್ ಇನ್–ಲೈನ್ ಎಂಜಿನ್ ಹೊಂದಿದ್ದು, 165 ಎಚ್ಪಿ ಹೊರಸೂಸಬಲ್ಲದು. ಕೇವಲ 3.2 ಸೆಕೆಂಡ್ಗಳಲ್ಲಿಪ್ರತಿ ಗಂಟೆಗೆ 0–100 ಕಿಲೋಮೀಟರ್ ವೇಗವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಎರಡನೇ ಪೀಳಿಗೆಯ ಈ ಮೊಟರ್ಸೈಕಲ್ ಅನ್ನು ಬಿಎಂಡಬ್ಲ್ಯು ಮೋಟಾರ್ಡ್ ಇಂಡಿಯಾದ ಡೀಲರ್ಶಿಪ್ಗಳಲ್ಲಿ ಇಂದಿನಿಂದಲೇ ಬುಕ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.