ADVERTISEMENT

2021ರಲ್ಲಿ 25 ಹೊಸ ವಾಹನ: ಬಿಎಂಡಬ್ಲ್ಯು

ಪಿಟಿಐ
Published 21 ಜನವರಿ 2021, 16:28 IST
Last Updated 21 ಜನವರಿ 2021, 16:28 IST
ಬಿಎಂಡಬ್ಲ್ಯು 3 ಸರಣಿಯ ಗ್ರ್ಯಾನ್‌ ಲಿಮೊಸಿನ್
ಬಿಎಂಡಬ್ಲ್ಯು 3 ಸರಣಿಯ ಗ್ರ್ಯಾನ್‌ ಲಿಮೊಸಿನ್   

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಬಿಎಂಡಬ್ಲ್ಯು ಸಮೂಹವು ಭಾರತದಲ್ಲಿ ಈ ವರ್ಷ 25 ಹೊಸ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಇದರಲ್ಲಿ ಎಂಟು ಸಂಪೂರ್ಣವಾಗಿ ಹೊಸ ವಾಹನ, ಒಂಬತ್ತು ಫೇಸ್‌ಲಿಫ್ಟ್‌ ಹಾಗೂ ಎಂಟು ಅವತರಣಿಕೆಗಳು ಇರಲಿವೆ ಎಂದು ತಿಳಿಸಿದೆ.

ಕಂಪನಿಯು ಗುರುವಾರ ಬಿಎಂಡಬ್ಲ್ಯು 3 ಸರಣಿಯ ಗ್ರ್ಯಾನ್‌ ಲಿಮೊಸಿನ್ ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ ಅದರ ಎಕ್ಸ್‌ ಷೋರೂಂ ಬೆಲೆ ₹ 51.5 ಲಕ್ಷದಿಂದ ₹ 53.9 ಲಕ್ಷದವರೆಗಿದೆ.

ಕೊರೊನಾದಿಂದಾಗಿ ಜನರು ವೈಯಕ್ತಿಕ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಈ ವರ್ಷ ಎರಡಂಕಿ ಪ್ರಗತಿ ಸಾಧಿಸುವ ವಿಶ್ವಾಸವನ್ನು ಕಂಪ‍ನಿ ಹೊಂದಿದೆ.

ADVERTISEMENT

‘2020ರಲ್ಲಿ ವಹಿವಾಟು ಸ್ಥಗಿತಗೊಂಡಿತ್ತು. ಕಳೆದ ವರ್ಷ 8 ತಿಂಗಳು ನಡೆದಿದ್ದ ಕಾರ್ಯಾಚರಣೆಗೆ ಹೋಲಿಸಿದರೆ ಈ ವರ್ಷ 12 ತಿಂಗಳು ಸಂಪೂರ್ಣವಾಗಿ ಕಾರ್ಯಾಚರಣೆ ನಡೆಸುವ ನಿರೀಕ್ಷೆ ಇದೆ. ಬೇಡಿಕೆಯು ನಿಧಾನವಾಗಿ ಚೇತರಿಕೆ ಕಂಡುಕೊಳ್ಳುತ್ತಿದೆ’ ಎಂದು ಬಿಎಂಡಬ್ಲ್ಯು ಸಮೂಹದ ಭಾರತದ ಅಧ್ಯಕ್ಷ ವಿಕ್ರಮ ಪವಾಹ್‌ ಹೇಳಿದ್ದಾರೆ.

ಕಳೆದ ವರ್ಷದ ನವೆಂಬರ್‌–ಡಿಸೆಂಬರ್ ಅವಧಿಯಲ್ಲಿ ಕಂಪನಿಯು ಕೋವಿಡ್‌ಗೂ ಮುಂಚಿನ ಮಟ್ಟವನ್ನು ತಲುಪಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.