ADVERTISEMENT

‘ಸಿ3’ ಮಾದರಿ ಹೊಸ ಕಾರ್ ಪರಿಚಯಿಸಿದ ಸಿಟ್ರಾನ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 13:40 IST
Last Updated 16 ಸೆಪ್ಟೆಂಬರ್ 2021, 13:40 IST
ಹೊಸ ಸಿ3
ಹೊಸ ಸಿ3   

ಬೆಂಗಳೂರು: ವಾಹನ ತಯಾರಿಕಾ ಕಂಪನಿ ಸಿಟ್ರಾನ್‌, ಭಾರತದ ಮಾರುಕಟ್ಟೆಗೆ ತನ್ನ ಹೊಸ ಮಾದರಿ ‘ಸಿ3’ಅನ್ನು ಗುರುವಾರ ಪರಿಚಯಿಸಿದೆ. ಮುಂದಿನ ವರ್ಷದ ಮೊದಲಾರ್ಧದಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆ ಹೊಂದಿದೆ.

ಎಸ್‌ಯುವಿ ಇಂದ ಪ್ರೇರಿತ್ ಹ್ಯಾಚ್‌ಬ್ಯಾಕ್‌ ಇದಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೂರು ವಾಹನಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಕಂಪನಿ ಇಟ್ಟುಕೊಂಡಿದ್ದು ಮೊದಲ ಮಾದರಿ ಇದಾಗಿದೆ.

ಈ ವಾಹನವು 4 ಮೀಟರ್‌ಗಿಂತ ಕಡಿಮೆ ಉದ್ದವಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಚೆನ್ನೈ ಘಟಕದಿಂದ 2022ರ ಮೊದಲಾರ್ಧದಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.