ADVERTISEMENT

ಫೋರ್ಡ್‌ ಫ್ರೀಸ್ಟೈಲ್‌ ಫ್ಲೇರ್‌ ಮಾರುಕಟ್ಟೆಗೆ

ಪಿಟಿಐ
Published 12 ಆಗಸ್ಟ್ 2020, 14:26 IST
Last Updated 12 ಆಗಸ್ಟ್ 2020, 14:26 IST
ಫೋರ್ಡ್‌
ಫೋರ್ಡ್‌   

ನವದೆಹಲಿ: ಫೋರ್ಡ್‌ ಇಂಡಿಯಾ ಕಂಪನಿಯುಕಾಂಪ್ಯಾಕ್ಟ್‌ ಎಸ್‌ಯುವಿ ‘ಫೋರ್ಡ್‌ ಫ್ರೀಸ್ಟೈಲ್‌ ಫ್ಲೇರ್’‌ ಬಿಡುಗಡೆ ಮಾಡಿದೆ. ಇದು ಟಾಪ್‌ ಎಂಡ್‌ ಅವತರಣಿಕೆಯಾಗಿದೆ.

ಇದರ ಎಕ್ಸ್‌ ಷೋರೂಂ ಬೆಲೆ ₹ 7.69 ಲಕ್ಷದಿಂದ ₹ 8.79 ಲಕ್ಷದವರೆಗಿದೆ. 1.2 ಲೀಟರ್‌ ಪೆಟ್ರೋಲ್ ಮತ್ತು 1.5 ಲೀಟರ್‌ ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಎರಡೂ ಎಂಜಿನ್‌ಗಳು 5 ಸ್ಪೀಡ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ ಒಳಗೊಂಡಿವೆ ಎಂದು ಕಂಪನಿ ತಿಳಿಸಿದೆ.

7 ಇಂಚಿನ ಟ್‌ಚ್‌ಸ್ಕ್ರೀನ್‌ ಇನ್ಫೊಟೇನ್‌ಮೆಂಟ್‌ ಸಿಸ್ಟಂ, ಆಟೊಮೆಟಿಕ್‌ ಹೆಡ್‌ಲ್ಯಾಂಪ್ಸ್‌ ಮತ್ತು ವೈಪರ್ಸ್‌, ರಿವರ್ಸ್‌ ಪಾರ್ಕಿಂಗ್‌ ಕ್ಯಾಮೆರಾ, ರಿಮೋಟ್‌ ಕಂಟ್ರೋಲ್‌ ಲಾಕಿಂಗ್‌ ಮತ್ತು ಆಟೊಮ್ಯಾಟಿಕ್‌ ಏರ್‌ ಕಂಡೀಷನರ್, ಆರು ಏರ್‌ಬ್ಯಾಗ್‌ಗಳು, ಇಂಟಲಿಜೆಂಟ್‌ ಆ್ಯಕ್ಟಿವ್‌ ರೋಲ್‌ಓವರ್‌ ಪ್ರಿವೆನ್ಶನ್‌ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.