ADVERTISEMENT

ಹುಂಡೈ ಟಕ್ಸನ್‌ ಬುಕಿಂಗ್‌ ಆರಂಭ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 13:54 IST
Last Updated 10 ಆಗಸ್ಟ್ 2022, 13:54 IST
ಬೆಂಗಳೂರಿನ ಅದ್ವೈತ ಹುಂಡೈ ಷೋರೂಂನಲ್ಲಿ ಹುಂಡೈ ಟಕ್ಸನ್‌ ಬಿಡುಗಡೆ ಮಾಡಲಾಯಿತು. ಚಿತ್ರ ನಟಿ ನೇಹಾ ಸಕ್ಸೇನಾ, ಅದ್ವೈತ ಮ್ಯಾನೇಜ್‌ಮೆಂಟ್‌ನ ಸಂಜಿತ್‌ ಮತ್ತು ಅದ್ವೈತ ಹುಂಡೈನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಎಲ್‌.ಎನ್. ಅಜಯ್‌ ಸಿಂಗ್‌ ಇದ್ದರು.

ಬೆಂಗಳೂರು: ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ಹೊಸ ಟಕ್ಸನ್‌ ಎಸ್‌ಯುವಿಯ ಬುಕಿಂಗ್‌ ಆರಂಭಿಸಿದೆ. ₹ 25 ಸಾವಿರ ಪಾವತಿಸಿ ಬುಕಿಂಗ್‌ ಮಾಡಬಹುದು ಎಂದು ಕಂಪನಿ ಹೇಳಿದೆ.

125 ನಗರಗಳಲ್ಲಿ ಇರುವ 246 ಮಳಿಗೆಗಳ ಮೂಲಕ ಟಕ್ಸನ್‌ ವಾಹನ ಕಾಯ್ದಿರಿಸಬಹುದು. ಪ್ಲಾಟಿನಂ ಮತ್ತು ಸಿಗ್ನೆಚರ್‌ ಎಂಬ ಎರಡು ಆವೃತ್ತಿಗಳಲ್ಲಿ ಇದು ಲಭ್ಯವಿದೆ.

ಪ್ಲಾಟಿನಂ ಆವೃತ್ತಿಯಲ್ಲಿ ಗ್ರಾಹಕರಿಗೆ 45ಕ್ಕೂ ಹೆಚ್ಚಿನ ಸ್ಟ್ಯಾಂಡರ್ಡ್‌ ಸುರಕ್ಷತಾ ವೈಶಿಷ್ಟ್ಯಗಳು ಇರಲಿವೆ. ಸಿಗ್ನೆಚರ್‌ ಆವೃತ್ತಿಯಲ್ಲಿ 60ಕ್ಕೂ ಅಧಿಕ ಸುರಕ್ಷತಾ ವೈಶಿಷ್ಟ್ಯಗಳು ಇವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.